ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿಯವರಿಂದ ರೂ.3ಲಕ್ಷ ವೆಚ್ಚದಲ್ಲಿ ಆಹಾರ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೋನಾ ವೈರಸ್ ಮಾಹಾಮಾರಿಯಿಂದ ಇಡೀ ವಿಶ್ವವೇ ನಲುಗಿತ್ತಿರುವ ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶ್ರೀ ಉಮಾಮಹೇಶ್ವರ ದೇವಸ್ಥಾನ ಮರೋಡಿ ಇದರ ಆಡಳಿತ ಮೊಕ್ತೇಶರ, ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿಯವರು ತಮ್ಮ ವೈಯಕ್ತಕ ನೆಲೆಯಲ್ಲಿ ಸುಮಾರು ರೂ. 3ಲಕ್ಷ ವೆಚ್ಚದಲ್ಲಿ ಆಹಾರ ಕಿಟ್ ವಿತರಿಸಿದರು.

ಕಳೆದ ಹಲವು ವರ್ಷಗಳಿಂದ ತನ್ನಿಂದಾದ ಸಹಾಯ ಹಸ್ತವನ್ನು ನೀಡುತ್ತಾ ಬರುತ್ತಿರುವ ದೇವೇಂದ್ರ ಹೆಗ್ಡೆ ಕೊಕ್ರಾಡಿಯವರು ಬೆಂಗಳೂರಿನಲ್ಲಿ ಕೈಗಾರಿಕೋದ್ಯಮಿಯಾಗಿ ಕಾರ್‍ಯನಿರ್ವಹಿಸಿದ್ದು ಈ ಬಾರಿ ಅಪ್ಪಳಿಸಿದ ಕೊರೋನಾದಿಂದ ಜನಜೀವನ ಅಸ್ತವ್ಯಸ್ತವಾಗಿದ್ದನ್ನು ಮನಗಂಡು ಅಶಕ್ತರಿಗೆ, ಬಡವರಿಗೆ, ನಿರ್ಗತಿಗರಿಗೆ ಸಹಾಯ ಹಸ್ತ ನೀಡಿದ್ದಾರೆ.

ತಾನು ಹುಟ್ಟಿ ಬೆಳೆದ ಕೊಕ್ರಾಡಿ ಪರಿಸರದಲ್ಲಿ ಸುಮಾರು 10ಕ್ವಿಂಟಾಲ್ ಅಕ್ಕಿ, ಶಾಸಕರ ಕೋವೀಡ್ ಕಿಟ್ ಇದಕ್ಕಾಗಿ ರೂ.1 ಲಕ್ಷ, ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕಕ್ಕೆ 7.50 ಕ್ವಿಂಟಾಲ್ ಅಕ್ಕಿ, ಬೆಂಗಳೂರಿನ ವಿಜಯನಗರ ಬಿ.ಸಿ ಲೇಔಟ್‌ನ 35 ಕುಟುಂಬಗಳಿಗೆ ಸುಮಾರು ರೂ.25 ಸಾವಿರದ ಆಹಾರ ಕಿಟ್, ಬೆಂಗಳೂರಿನಲ್ಲಿ 100 ಆಹಾರ ಕಿಟ್, ಮರೋಡಿ ಕೂಕ್ರಬೆಟ್ಟು ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿರುವರಿಗೆ 50ಕೆ.ಜಿ ಅಕ್ಕಿ ಹಾಗೂ ಮುಂಬಯಿಯ ಮಿತ್ರರ ಕರೆಯ ಮೇರೆಗೆ ಮುಂಬಯಿಯಲ್ಲಿರುವ ಕೆಲವು ಕುಟುಂಬಗಳಿಗೆ ಸದ್ದಿಲ್ಲದೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದಿದ್ದಾರೆ.

ದೇವಸ್ಥಾನದ ಅರ್ಚಕರಿಗೆ ಪರಿಹಾರ
ದ.ಕ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ದೇವೇಂದ್ರ ಹೆಗ್ಡೆ ಕೊಕ್ರಾಡಿಯವರು ಇತ್ತೀಚೆಗೆ ದೇವಸ್ಥಾನದ ಅರ್ಚಕರಿಗೆ ಸರಕಾರ ವಿಶೇಷ ಪರಿಹಾರ ಘೋಷಿಸಬೇಕೆಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದ್ದರು. ಇದೀಗ ಸರಕಾರ ಮುಜರಾಯಿ ಇಲಾಖೆಗೆ ಒಳಪಟ್ಟ ಎಲ್ಲಾ ದೇವಸ್ಥಾನದ ಅರ್ಚಕರಿಗೆ ಪರಿಹಾರವನ್ನು ಘೋಷಿಸಿದ್ದು ದೇವೇಂದ್ರ ಹೆಗ್ಡೆಯವರು ನೀಡಿದ ಮನವಿಗೆ ಸರಕಾರ ಸ್ಪಂದಿಸಿದಂತಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.