HomePage_Banner_
HomePage_Banner_

ಮುಂಡಾಜೆಯ ಚಾಮುಂಡಿ ನಗರ ಪರಿಸರದಲ್ಲಿ ಕಾಡಾನೆಗಳ ದಾಳಿ: ಅಪಾರ ಕೃಷಿ ನಷ್ಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮುಂಡಾಜೆ-ದುಂಬೆಟ್ಟು ಚಾಮುಂಡಿನಗರ ನಿವಾಸಿಯಾದ ಕಜೆ ವೆಂಕಟೇಶ್ವರ ಭಟ್ ಅವರ ತೋಟಕ್ಕೆ ಮೇ 24ರ ಬೆಳಗಿನ ಜಾವ ಮೂರು ಕಾಡಾನೆಗಳ ಹಿಂಡು ದಾಳಿ ಮಾಡಿ ಅಪಾರ ಕೃಷಿಗಳ ನಷ್ಟ ಉಂಟು ಮಾಡಿದೆ.

ಈ ಕಾಡಾನೆಗಳ ದಾಳಿಗೆ ತೋಟದಲ್ಲಿದ್ದ 50ರಿಂದ 60 ಅಡಿಕೆ ಮರಗಳು, 10ಕ್ಕೂ ಹೆಚ್ಚು ತೆಂಗಿನ ಮರಗಳು, ಕೊಕ್ಕೋ, ಬಾಳೆಗಿಡಗಳು, ಕಾಳುಮೆಣಸು ಬೆಳೆಗಳು ನಷ್ಟವಾಗಿದೆ. ಕಾಡಾನೆಗಳ ಹಿಂಡು ತಡೆಗೋಡೆ ಕೆಡವಿ ಹಾಕಿ ಅಡಿಕೆ ಮರಗಳ ಮುರಿದು ಹಾಕುವ ಶಬ್ಧ ಕೇಳಿಸಿದೆ.

ಆ ಸಂದರ್ಭದಲ್ಲಿ ಆನೆಗಳಿಗೆ ಬೆಳಕು ಹರಿಸಿ, ಕೂಗಾಡಿ ಶಬ್ಧ ಮಾಡಿದಾಗ ಆನೆಗಳು ಗಲಿಬಿಲಿಯಾಗಿ ಚಾರ್ಮಾಡಿ ಭಾಗಕ್ಕೆ ಓಡಿಹೋದವು ಎಂದು ಕೃಷಿಕ ವೆಂಕಟೇಶ್ವರ ಭಟ್ ಸುದ್ದಿ ಸಹಾಯವಾಣಿಗೆ ಮಾಹಿತಿ ನೀಡಿದರು. ಈ ಬಗ್ಗೆ ಅವರು ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದಾರೆ.

ಈ ಹಿಂದೆ 2019ರಲ್ಲಿಯೂ ವೆಂಕಟೇಶ್ವರ ಭಟ್ ಅವರ ತೋಟವು ಭಾರಿ ಪ್ರವಾಹಕ್ಕೆ ತುತ್ತಾಗಿ ತೋಟ, ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವನ್ನು ಉಂಟು ಮಾಡಿತ್ತು. ಪ್ರವಾಹದ ರಭಸಕ್ಕೆ ತಡೆಗೋಡೆಗೆ ಹಾನಿಯುಂಟಾಗಿ ತೋಟಕ್ಕೆ ಭಾರಿ ಪ್ರಮಾಣದಲ್ಲಿ ಮರಳು ತುಂಬಿಕೊಂಡು ಕೃಷಿ ನಷ್ಟವಾಗಿದ್ದವು. ಇದರಿಂದ ಚೇತರಿಕೆ ಕಾಣುವಷ್ಟರಲ್ಲಿ ಈ ಹಾನಿ ಸಂಭವಿಸಿದೆ ಎಂದು ಕೃಷಿಕ ಅಳಲು ತೋಡಿಕೊಂಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.