ಪದೋನ್ನತಿಗೊಂಡ ನ್ಯಾಯಧೀಶ ಕೆ.ಎಂ ಆನಂದರಿಗೆ ಬೀಳ್ಕೋಡುಗೆ

ಬೆಳ್ತಂಗಡಿ ನ್ಯಾಯಾಲಯದಲ್ಲಿ ಮೂರು ವರ್ಷದಿಂದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ಹಿರಿಯ ಶ್ರೇಣಿಯ ನ್ಯಾಯಾಧೀಶರಾಗಿ ಬೆಂಗಳೂರಿಗೆ ವರ್ಗಾವಣೆಗೊಂಡ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಕೆ.ಎಂ. ಆನಂದರವರಿಗೆ ನ್ಯಾಯಾಲಯದಲ್ಲಿ ಮೇ 20 ರಂದು ಸರಳವಾಗಿ ಬೋಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು.
ಬೀಳ್ಕೊಡುಗೆ ಸಮಾರಂಭವನ್ನು ಸರಕಾರಿ ಆದೇಶದಂತೆ ಕೋವಿಡ್-19 ಇರುವುದರಿಂದ ಸರಳವಾಗಿ ಆಚರಿಸಲಾಯಿತು. ಅಧ್ಯಕ್ಷ ಸ್ಥಾನವನ್ನು ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ನಾಗೇಶ್ ಮೂರ್ತಿಯವರು ವಹಿಸಿದ್ದು, ಮುಂದಿನ ವೃತ್ತಿ ಜೀವನವೂ ಸುಂದರಮಯವಾಗಿರಲಿ ಎಂದು ಹಾರೈಸಿ, ಹೆಚ್ಚುವರಿ ನ್ಯಾಯಾಧೀಶರಾದ ಸತೀಶ್ ಕೆ.ಜಿ.ಯವರು ಮತ್ತು ಸರಕಾರಿ ಅಭಿಯೋಜಕರಾದ ಕಿರಣ್ ಕುಮಾರ್ ಅವರ ಶುಭಾಶಯ ಕೋರಿದರು.
ವಕೀಲರ ಸಂಘದ ಅಧ್ಯಕ್ಷ ಎಲೋಸಿಯಸ್ ಎಸ್.ಲೋಬೊ ಅವರು ಬೋಳ್ಕೊಡುಗೆ ಮಾತಿನಲ್ಲಿ ನ್ಯಾಯಾಲಯದಲ್ಲಿ ಉತ್ತಮ ನ್ಯಾಯಾಧೀಕರಣ ನೀಡಿ, ಹಲವಾರು ಕಾನೂನು ಮಾಹಿತಿ ಶಿಬಿರಗಳನ್ನು ಏರ್ಪಡಿಸಿ, ನ್ಯಾಯಾಲಯದ ಆವರಣವನ್ನು ನೂರಾರು ಗಿಡಗಳನ್ನು ನೆಟ್ಟು ಆನಂದ ವನದಂತೆ ಮಾಡಿದಂತ ಕೀರ್ತಿಯು ತಮಗೆ ಸಲ್ಲುತ್ತದೆ ಹಾಗೂ ತಮ್ಮ ಮುಂದಿನ ಜೀವನವೂ ಬಡವರ ಹಾಗೂ ನಿರ್ಗತಿಕರ ಪರ ಇರಲಿ ಎಂದು ಹಾರೈಸಿದರು.
ಸಂಘದ ಕಾರ್ಯದರ್ಶಿ ಕೃಷ್ಣ ಅವರು ಪ್ರಾಸ್ಥಾವಿಸಿ ಮಾತನಾಡಿದರು, ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ನ್ಯಾಯಾಲಯದ‌ ಶಿರಸ್ತೆದಾರರು ಮತ್ತು ಸಿಬಂದಿ ವರ್ಗ ಹಾಜರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.