ಬೆಳ್ತಂಗಡಿ: ಕಳೆದ ಹಲವು ವರ್ಷದಿಂದ ಬೆಳ್ತಂಗಡಿ ವೀರಾಂಜನೆಯ ಸೇವಾ ಸಮಿತಿಯು ಅಶಕ್ತರಿಗೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ನೆರವನ್ನು ನೀಡುತ್ತಾ ಬರುತ್ತಿದ್ದು ಈ ಬಾರಿ ಕೊರೋನಾ ವೈರಸ್ ಮಹಾಮಾರಿಯಿಂದ ಜನಜೀವನ ತತ್ತರಿಸಿದ ಈ ಸಂದರ್ಭದಲ್ಲಿ ಸಮಸ್ಯೆಯಲ್ಲಿರುವ ಕುಟುಂಬಕ್ಕೆ ವಿವಿಧ ರೀತಿಯಲ್ಲಿ ಸೇವೆ ನೀಡಿದ್ದಾರೆ
ವೀರಾಂಜನೇಯ ಸೇವಾ ಸಮಿತಿಯ 33 ಹಾಗೂ 34ನೇ ಸೇವಾ ಯೋಜನೆಯನ್ನು ಕಾರ್ಕಳ ತಾಲೂಕಿನ ಈದು ಗ್ರಾಮದ 7ವರ್ಷದ ಮಗು ಬೋನ್ ಕ್ಯಾನ್ಸರ್ನಿಂದ ಬಳಲುತ್ತಿರುವ ಸಾನ್ವಿತ್ರವರಿಗೆ ಮತ್ತು ಬೆಳ್ತಂಗಡಿ ಬಂದಾರು ಗ್ರಾಮದ ಪಾಪುದಡ್ಡ ನಿವಾಸಿ ನಂದೀಶ್ರವರು ರಸ್ತೆ ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯವಾಗಿದ್ದು ಅವರಿಗೆ ಆರ್ಥಿಕ ಸಹಾಯ ಮಾಡಿ 2ಕುಟುಂಬಕ್ಕೆ ಧೈರ್ಯ ನೀಡಿದ್ದಾರೆ.
ಈ ಸಂದರ್ಭದಲ್ಲಿ ವೀರಾಂಜನೆಯ ಸೇವಾ ಸಮಿತಿಯ ಸತೀಶ್ ಪೆರಾಡಿ, ಸುದರ್ಶನ್ ಪೆರಾಡಿ, ನಿಕೇಶ್ ಅಂಡಿಂಜೆ, ಅನಿಲ್ ಪಡಂಗಡಿ, ಹರೀಶ್ ಪೂಜಾರಿ ಪಡಂಗಡಿ, ಕಿರಣ್ ಮಡಂತ್ಯಾರು, ಅಕ್ಷಿತ್ ವೇಣೂರು, ಸಂತೋಷ್ ಕಲ್ಲಾಣಿ, ಹರ್ಷಿತ್ ಅಂಡಿಂಜೆ ಉಪಸ್ಥಿತರಿದ್ದರು.