HomePage_Banner_
HomePage_Banner_

ಬೆಳಾಲಿನ ವಿದ್ಯಾರ್ಥಿನಿ ರೇಷ್ಮಾ ಬರೆದ ಕವನ ಸಂಕಲನ ಮೆಚ್ಚಿ ಪತ್ರ ಬರೆದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಳ್ತಂಗಡಿ: ತಾಲೂಕಿನ ಬೆಳಾಲು, ಮಾಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ರೇಷ್ಮಾ ಬರೆದ ‘ಗುರುಕಾಣಿಕೆ’ ಎಂಬ ಕವನ ಸಂಕಲನ ಪುಸ್ತಕವನ್ನು ಮೆಚ್ಚಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಅಭಿನಂದನಾ ಪತ್ರ ಬರೆದಿದ್ದಾರೆ.

ಪ್ರೌಢ ಶಾಲೆಯಲ್ಲಿರುವಾಗಲೇ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಕವನಗಳ ರೂಪದಲ್ಲಿ ವ್ಯಕ್ತಪಡಿಸಿ ಕಾವ್ಯಲೋಕಕ್ಕೆ ತನ್ನ ಕಾಣಿಕೆ ಅರ್ಪಿಸುತ್ತಿರುವುದು ಖುಷಿಯ ಸಂಗತಿಯಾಗಿದೆ. ನಾಡು, ನುಡಿ, ರಾಷ್ಟ್ರ, ಗುರುಗಳು, ತಂದೆ, ತಾಯಿ ಹಾಗೂ ಪ್ರಕೃತಿ ಪ್ರೇಮದ ಕುರಿತ ಸಾಲುಗಳು ಮೆಚ್ಚುವಂತದ್ದು. ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿ ನೀನು ಎಲ್ಲರಿಗೂ ಮಾದರಿ ಎನ್ನಲು ಹೆಮ್ಮೆ ಎನಿಸುತ್ತದೆ. ಈ ಕಾವ್ಯ ಕೃಷಿಯನ್ನು ಮುಂದುವರಿಸಿ ಕನ್ನಡ ಸಾರಸ್ವತ ಲೋಕಕ್ಕೆ ಉತ್ತಮ ಕೃತಿಗಳು ಸಮರ್ಪಿತವಾಗಲಿ ಎಂದು ಶಿಕ್ಷಣ ಸಚಿವರು ಪತ್ರದಲ್ಲಿ ಹಾರೈಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.