ಬೆಳ್ತಂಗಡಿ: ಕೊರೊನಾ ವೈರಸ್ನಿಂದ ಸುರಕ್ಷತೆ ಕಾಪಾಡಿಕೊಳ್ಳಲು ಕೈಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಿಕೊಳ್ಳುವುದಕ್ಕಾಗಿ ಬೆಳ್ತಂಗಡಿಯ ರೋಟರಿ ಕ್ಲಬ್ನ ವಿನ್ಸ್ ಮತ್ತು ಸ್ಯಾನಿಟೈಸೆಶನ್ ಯೋಜನೆಯಡಿಯಲ್ಲಿ ಅಳದಂಗಡಿಯ ಸ್ವಾತಿ ಡೆಂಟಲ್ ಕ್ಲಿನಿಕ್ ಗೆ ಹಾಗೂ ಬೆಳ್ತಂಗಡಿಯ ಸ್ವಾತಿ ಡೆಂಟಲ್ ಕ್ಲಿನಿಕ್ಗೆ ತಲಾ ಒಂದು ಸ್ಯಾನಿಟೈಸರ್ ಸ್ಟ್ಯಾಂಡ್ ನ್ನು ಹಸ್ತಾಂತರಿಸಿದೆ.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷರಾದ ಪ್ರತಾಪ ಸಿಂಹ ನಾಯಕ್, ನಿಯೋಜಿತ ಅಧ್ಯಕ್ಷ ಬಿ.ಕೆ.ಧನಂಜಯ ರಾವ್, ನಿಯೋಜಿತ ಕಾರ್ಯದರ್ಶಿ ರೋ.ಶ್ರೀಧರ್ ಕೆ.ವಿ, ರೋ.ಮಿಥುನ್ ಮಾಡ್ತಾ ಮತ್ತು ರೋ. ಶಶಿಧರ ಡೋಂಗ್ರೆ ಉಪಸ್ಥಿತರಿದ್ದರು.