HomePage_Banner_
HomePage_Banner_

ದಕ್ಷಿಣ ಕನ್ನಡದಲ್ಲಿ ಇಂದು ಮತ್ತೊಬ್ಬರಿಗೆ ಕೋವಿಡ್-19 ಸೋಂಕು ದೃಢ * ಉಡುಪಿಯಲ್ಲಿ ಮತ್ತೆ 6 ಮಂದಿಗೆ ತಗುಲಿದ ಕೊರೊನಾ ಮಹಾಮಾರಿ

ಬೆಳ್ತಂಗಡಿ: ಕರಾವಳಿಯ ಉಭಯ ಜಿಲ್ಲೆಗಳಿಗೆ ಮಹಾಮಾರಿ ಕೊರೊನಾ ಬುಧವಾರವೂ ಹೊಡೆತ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬರಿಗೆ ಹಾಗೂ ಉಡುಪಿ ಜಿಲ್ಲೆಯಲ್ಲಿ 6ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಮಂಗಳೂರಿನ ನೀರುಮಾರ್ಗ ನಿವಾಸಿ 40 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದು ಗಂಟಲು ದ್ರವ ಪರೀಕ್ಷೆಯ ವರದಿಯಲ್ಲಿ ತಿಳಿದು ಬಂದಿದೆ. ಈ ಮಹಿಳೆಯು ಕುಡುಪು ಮತ್ತು ಕುಂಟಿಕಾನದ ಮನೆಯಲ್ಲಿ ಬಗ್ಗೆ ಮಾಹಿತಿ ದೊರೆತಿದೆ. ಇದೀಗ ಈ ಮಹಿಳೆ ಒಂದು ವಾರಗಳ ಕಾಲ ಇದ್ದ ಪ್ರದೇಶವೆಲ್ಲವನ್ನೂ ಸೀಲ್‍ಡೌನ್ ಮಾಡುವ ಸಾಧ್ಯತೆಯಿದೆ.

ಸೋಂಕಿತ ಮಹಿಳೆಯು ಮೇ.10ರಂದು ಕಾರಿನಲ್ಲಿ ತನ್ನ ಮಗನೊಂದಿಗೆ ಬೆಂಗಳೂರಿನ ರಾಜಾಜಿನಗರದಿಂದ ಮಂಗಳೂರಿಗೆ ಬಂದಿದ್ದು ಅಸ್ತಮಾ ಮತ್ತು ಬಿಪಿಯಿಂದಾಗಿ ಮೇ.17 ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಯು ಬೆಂಗಳೂರಿನಲ್ಲಿ ಕೋರಿಯರ್‍ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈಗ ಬೆಂಗಳೂರಿನ ರಾಜಾಜಿನಗರದಲ್ಲಿ ಹಲವರ ಸಂಪರ್ಕ ಸಾಧ್ಯತೆ. ಕರಾವಳಿ ಮತ್ತು ಬೆಂಗಳೂರಿನ ರಾಜಾಜಿನಗರದಲ್ಲಿ ಈಗ ಆತಂಕ ಆವರಿಸಿದೆ.

ಒಟ್ಟಾರೆ ರಾಜ್ಯದಲ್ಲಿ ಮೇ20ರ ಮಧ್ಯಾಹ್ನದ ವರದಿಯಲ್ಲಿ 63 ಹೊಸ ಪ್ರಕರಣಗಳು ದೃಢಪಟ್ಟಿದ್ದು ಇದರೊಂದಿಗೆ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1458 ಕ್ಕೆ ಏರಿಕೆಯಾಗಿದೆ.

ಇನ್ನು ಉಳಿದಂತೆ ಹಾಸನದಲ್ಲಿ 21, ಮಂಡ್ಯ 8, ಬೀದರ್ 10, ಕಲ್ಬುರ್ಗಿ 7, ತುಮಕೂರು 4, ಯಾದಗಿರಿ, ಉತ್ತರ ಕನ್ನಡದಲ್ಲಿ ತಲಾ 1 ಪ್ರಕರಣಗಳು ದಾಖಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.