ಉಡುಪಿಯಲ್ಲಿ ಎಂಟು ವರ್ಷದ ಬಾಲಕ ಸೇರಿ ನಾಲ್ವರಲ್ಲಿ ಕೊರೊನಾ ದೃಢ!

  • ರಾಜ್ಯದಲ್ಲಿ ಮಧ್ಯಾಹ್ನದ ವರದಿಯಲ್ಲಿಯೇ ಬರೋಬ್ಬರಿ 127 ಮಂದಿಗೆ ಸೋಂಕು
  • ದೇಶದಲ್ಲಿ ಲಕ್ಷದ ಗಡಿ ದಾಟಿದ ಪಾಸಿಟಿವ್ ಸಂಖ್ಯೆ

ಬೆಳ್ತಂಗಡಿ:ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಮಂಗಳವಾರ ಉಡುಪಿ ಜಿಲ್ಲೆಯಲ್ಲಿ ಮತ್ತೆ ನಾಲ್ವರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಆಗಮಿಸಿ ಕ್ವಾರಂಟೈನ್‍ನಲ್ಲಿದ್ದ ನಾಲ್ವರಿಗೆ ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಎಂಟು ವರ್ಷದ ಮಗು ಸೇರಿ ಜಿಲ್ಲೆಯಲ್ಲಿ 24 ವರ್ಷದ ಪುರುಷ, 24 ವರ್ಷದ ಮಹಿಳೆ, 38 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರಿಗೂ ಉಡುಪಿಯ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದರಿಂದ ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ. 11 ಸಕ್ರಿಯ ಪ್ರಕರಣಗಳಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಚಿಕ್ಕಮಗಳೂರಿನಲ್ಲಿ ವೈದ್ಯಗೆ ಕೊರೊನಾ:
ಗ್ರೀನ್ ಝೋನ್ ಆಗಿದ್ದ ಚಿಕ್ಕಮಗಳೂರು ಜಿಲ್ಲೆಗೆ ಒಂದೇ ದಿನ ಎರಡು ಕೊರೊನಾ ವೈರಸ್ ಪ್ರಕರಣಗಳು ವಕ್ಕರಿಸಿದೆ. 43 ವರ್ಷದ ವೈದ್ಯ ಸೇರಿದಂತೆ 27 ವರ್ಷದ ಗರ್ಭಿಣಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಮೂಡಿಗೆರೆ ತಾಲೂಕಿನ ಪ್ರಾಥಮಿಕ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯನಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ವೈದ್ಯನ ಟ್ರಾವೆಲ್ ಹಿಸ್ಟರಿ ಎಲ್ಲರಲ್ಲೂ ಭಯ ಹುಟ್ಟಿಸಿದೆ.

ಮಧ್ಯಾಹ್ನದ ವರದಿಯಲ್ಲಿಯೇ ರಾಜ್ಯದ 127 ಮಂದಿಗೆ ಸೋಂಕು:

ಕೊರೊನಾ ಪಾಸಿಟಿವ್ ಪ್ರಕರಣ ಒಂದೇ ದಿನದಲ್ಲಿ ಅದರಲ್ಲೂ ಮಧ್ಯಾಹ್ನದ ವರದಿಯಲ್ಲಿಯೇ ರಾಜ್ಯದ 127 ಮಂದಿಗೆ ಸೋಂಕು ದೃಢಪಟ್ಟು ಈ ವರೆಗಿನ ದಿನದ ಸೋಂಕಿತರ ಸಂಖ್ಯೆಯ ದಾಖಲೆಯ ಮುರಿದಿದೆ. ಅದರಲ್ಲಿ ಮಂಡ್ಯ ಜಿಲ್ಲೆಯ ಬರೋಬ್ಬರಿ 62 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ ದಾವಣಗೆರೆ 19, ಶಿವಮೊಗ್ಗ 12, ಕಲಬುರಗಿ 11, ಬೆಂಗಳೂರು 6, ಉತ್ತರಕನ್ನಡ 4, ಹಾಸನ 3, ಚಿಕ್ಕಮಗಳೂರು 2, ಚಿತ್ರದುರ್ಗ, ವಿಜಯಪುರ, ಗದಗ, ಯಾದಗಿರಿ ತಲಾ 1 ಪ್ರಕರಣ ವರದಿಯಾಗಿದೆ.

ದೇಶದಲ್ಲಿಯೂ ಲಕ್ಷ ಮೀರಿದ ಸೋಂಕಿತರು:
ದೇಶದಲ್ಲಿಯೂ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ದೇಶಾದ್ಯಂತ ಮಾರಕ ಕೊರೊನಾವೈರಸ್ ಸೋಂಕಿಗೆ ತುತ್ತಾದವರ ಸಂಖ್ಯೆ 1 ಲಕ್ಷದ ಗಡಿಯನ್ನು ದಾಟಿದೆ. ಕಳೆದ 24 ಗಂಟೆಗಳಲ್ಲೇ 4,970 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಂದೇ ದಿನ 134 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,01,139ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 3,163ಕ್ಕೆ ಏರಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.