ರಾಜ್ಯ ಸರ್ಕಾರ ಅನುಮತಿ ನೀಡಿದರೂ ರಸ್ತೆಗಿಳಿಯದ ಖಾಸಗಿ ಬಸ್‍ಗಳು! ಬೆಳ್ತಂಗಡಿ ಕೇಂದ್ರದಿಂದ ಸಂಚರಿಸುವ ಖಾಸಗಿ ಬಸ್‍ಗಳ ಓಡಾಟವೂ ಇಲ್ಲ

Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಹೇರಲಾಗಿದ್ದ ಲಾಕ್‍ಡೌನ್‍ನಿಂದಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಖಾಸಗಿ ಬಸ್‍ಗಳ ಓಡಾಟ ಕಳೆದ ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಕಾಲ ಸ್ತಬ್ಧವಾಗಿತ್ತು.ಈಗ ಲಾಕ್‍ಡೌನ್ ಕೊಂಚ ಸಡಿಲಿಕೆ ಮಾಡಿರುವ ರಾಜ್ಯ ಸರ್ಕಾರವು ಕೆಲವು ಷರತ್ತುಗಳನ್ನು ವಿಧಿಸಿ ಬಸ್‍ಗಳ ಸಂಚಾರಕ್ಕೆ ಅನುಮತಿ ನೀಡಿದೆ.

ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 19ರಿಂದ ಖಾಸಗಿ ಬಸ್‍ಗಳು ರಸ್ತೆಗೆ ಇಳಿಯಲಿಲ್ಲ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸಂಚರಿಸುವ ಕಾರ್ಕಳ, ಮೂಡಬಿದಿರೆ, ಉಪ್ಪಿನಂಗಡಿ ಮಾರ್ಗಗಳಿಗೆ ಸಂಚರಿಸುವ ಖಾಸಗಿ ಬಸ್‍ಗಳು ಕೂಡ ಓಡಾಟವನ್ನು ಆರಂಭಿಸಿಲ್ಲ.
ಖಾಸಗಿ ಬಸ್ ಸಂಚಾರ ನಡೆಸಬಹುದೆಂದು ಸರ್ಕಾರ ಪ್ರಕಟಿಸಿದರೂ ನಿರ್ದೇಶನ ಬಂದಿಲ್ಲ. ಹಾಗಾಗಿ ಮಂಗಳವಾರದಿಂದ ಬಸ್ ಸಂಚಾರ ಪುನಾರಾರಂಭಿಸುವ ಬಗ್ಗೆ ನಿರ್ಧಾರ ತಳೆದಿಲ್ಲ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಹೇಳಿದ್ದಾರೆ.

ನಮ್ಮ ಬೇಡಿಕೆಗೆ ಒಪ್ಪಲಿ: ದಿಲ್‍ರಾಜ್ ಆಳ್ವ
ಲಾಕ್‍ಡೌನ್‍ನಿಂದಾಗಿ ಬಸ್ ಸಂಚಾರವಿಲ್ಲದ್ದರಿಂದ ತೆರಿಗೆ ಪಾವತಿ ಅಸಾಧ್ಯ ಪರಿಸ್ಥಿತಿ ಉಂಟಾಗಿದೆ. ಲಾಕ್‍ಡೌನ್ ಅವಧಿಯ ತೆರಿಗೆ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ ಮಂಗಳೂರು ನಗರದಿಂದ ಸಂಚರಿಸುವ ಖಾಸಗಿ ಸಿಟಿ ಮತ್ತು ಸರ್ವೀಸ್ ಬಸ್‍ಗಳ ಪರವಾನಗಿಯನ್ನು ಆರ್‍ಟಿಒಗೆ ಒಪ್ಪಿಸಲಾಗಿದೆ. ಈಗ ಮೇ 19ರಿಂದ ಬಸ್‍ಗಳ ಸಂಚಾರ ಆರಂಭಿಸುವುದಾದರೆ ಇಡೀ ತಿಂಗಳ ತೆರಿಗೆ ಪಾವತಿಸಬೇಕಾಗುತ್ತದೆ. ನಮ್ಮ ಬೇಡಿಕೆಗೆ ಒಪ್ಪಿದರೆ ಜೂನ್ 1ರಿಂದ ಬಸ್ ಓಡಿಸಲು ಸಿದ್ಧರಿದ್ದೇವೆ ಎಂದು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ದಿಲ್‍ರಾಜ್ ಆಳ್ವ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.