ಬಂದಾರು ಮಂಗಗಳ ಸಾಮೂಹಿಕ ಮಾರಣಹೋಮ:: ಎಸಿಎಫ್, ಆರ್‌ಎಫ್‌ಒ ನೇತೃತ್ವದಲ್ಲಿ ಅಂತ್ಯಸಂಸ್ಕಾರ

Advt_NewsUnder_1
Advt_NewsUnder_1



ಬಂದಾರು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಮಂಗಗಳ ಸಾಮೂಹಿಕ ಮಾರಣಹೋಮ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆಯ ಎಸಿಎಫ್ ಸುಬ್ರಹ್ಮಣ್ಯ ರಾವ್, ಉಪ್ಪಿನಂಗಡಿ ಆರ್‌ಎಫ್‌ಒ ಮಧುಸೂಧನ್ ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅದೇ ಸ್ಥಳದಲ್ಲಿ ಮಂಗಗಳ ದಹನ ಕಾರ್ಯ ನಡೆಸಲಾಗಿದೆ.

ಕೆ.ಎಫ್.ಡಿ ಕಾಯಿಲೆ ಶಂಕೆ ಇಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದು, ಪಶುಸಂಗೋಪನೆ ಇಲಾಖೆ ಮರಣೋತ್ತರ ಪರೀಕ್ಷೆ ಕೈಗೊಂಡಿದೆ. ಅದರ ಎಫ್.ಎಸ್.ಲ್ ವರದಿಗಾಗಿ ಕಾಯಲಾಗುತ್ತಿದ್ದು, ವರದಿ ಆಧರಿಸಿ ಮುಂದಿನ ತನಿಖೆ ನಡೆಯಲಿದೆ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್ ಸುದ್ದಿಗೆ ತಿಳಿಸಿದ್ದಾರೆ. ಮಂಗಗಳ ಉಪಟಳ ತಾಳಲಾರದೆ ಯಾರೋ ಹಣ್ಣುಹಂಪಲುಗಳಲ್ಲಿ ವಿಷ ಬೆರೆಸಿ ಮಂಗಗಳನ್ನು ಕೊಳ್ಳುವ ಯತ್ನ ನಡೆಸಿರುವ ಬಗ್ಗೆ ಶಂಕೆ ಇದೆ.

ಅವುಗಳ ಮೃತದೇಹ ಸಿಕ್ಕಿದ ಪ್ರದೇಶದಲ್ಲಿ ಗುಂಡಿ ತೋಡಿ ಅದರಲ್ಲಿ ದಹನ ನಡೆಸಿ ಬಳಿಕ ಆ ಗುಂಡಿಯನ್ನು ಮಣ್ಣುತುಂಬಿ ಮುಚ್ಚಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ವಲಯದ ಉಪವಲಯ ಅರಣ್ಯಾಧಿಕಾರಿ ರಾಮಯ್ಯ ಗೌಡ ಅವರು ಉಪ್ಪಿನಂಗಡಿ ಠಾಣೆಗೆ ಪೊಲೀಸ್ ದೂರು ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.