ವಿಶ್ವನಾಥ ಗೌಡ ಹಳ್ಳಿಂಗೇರಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಇಲ್ಲಿಯ ಹಳ್ಳಿಂಗೇರಿ ಕೃತಿವಾಸ ನಿವಾಸಿ ಹಳ್ಳಿಂಗೇರಿ ಶ್ರೀ ದುರ್ಗಾಪರಮೇಶ್ವರಿ ಪ್ರಾರ್ಥನಾ ಮಂದಿರದ ಧರ್ಮದರ್ಶಿ ವಿಶ್ವನಾಥ ಗೌಡ (53ವ) ರವರು ಮೇ.14 ರಂದು ಹೃದಯಾಘಾತದಿಂದ ನಿಧನರಾದರು.

36 ವರ್ಷಗಳಿಂದ ಜೀಪು ಮಾಲಕ ಚಾಲಕರಾಗಿದ್ದ ಇವರು ಉಪ್ಪಿನಂಗಡಿ- ಕೊಕ್ಕಡ ಜೀಪು ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 36 ವರ್ಷಗಳಿಂದ ಸತತ ಶಬರಿಮಲೆ ತೆರಳುತ್ತಿದ್ದ ಇವರು ಗುರುಸ್ವಾಮಿಯಾಗಿ ಅನೇಕರನ್ನು ಶಬರಿಮಲೆಗೆ ಕರೆದುಕೊಂಡು ಹೋಗುತ್ತಿದ್ದರು. ಹಲವಾರು ವರ್ಷಗಳಿಂದ ದೇವಿಯ ಆರಾಧನೆ ಮಾಡುತ್ತಿದ್ದ ಇವರಿಗೆ ಸಿದ್ದಿಯು ಆಗಿತ್ತು. ನಂತರ ಮನೆಯ ಹತ್ತಿರವೇ ಶ್ರೀ ದುರ್ಗಾಪರಮೇಶ್ವರಿ ಪ್ರಾರ್ಥನಾ ಮಂದಿರ ನಿರ್ಮಿಸಿ ಅನೇಕ ಊರ ಪರವೂರ ಭಕ್ತಾಧಿಗಳಿಗೆ ಪ್ರತೀ ಮಂಗಳವಾರ, ಶುಕ್ರವಾರ, ಆದಿತ್ಯವಾರ ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ಶೃಂಗೇರಿ ಸ್ವಾಮೀಜಿಗಳ ಪರಮ ಭಕ್ತರಾದ ಇವರು ಸ್ವಾಮೀಜಿಗಳು ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಕಿರಿಯ ಸ್ವಾಮೀಜಿಗಳು ಇವರ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿದ್ದರು.

ಮೃತರು ಪತ್ನಿ ಮಮತಾ, ಪುತ್ರ ಯತೀಶ್, ಮೂವರು ಪುತ್ರಿಯರಾದ ಶ್ವೇತಾ, ಅಶ್ವಿತಾ, ಅಕ್ಷತಾ ಇವರುಗಳನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.