ಕೃಷಿ ವಲಯಕ್ಕೆ ರೂ.1ಲಕ್ಷ ಕೋಟಿ ಮೀಸಲು, ಕರ್ನಾಟಕದ ರಾಗಿಗೆ ಗ್ಲೋಬಲ್ ಬ್ರ್ಯಾಂಡಿಂಗ್

* ಕೇಂದ್ರದ ರೂ.20ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನ 3ನೇ ಹಂಚಿಕೆ ಘೋಷಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್


ನವದೆಹಲಿ: ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗುವುದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಕೇಂದ್ರ ಸಚಿವೆ ನಿರ್ಮಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ರೂ.20ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್‍ನ ವಿವಿಧ ವಲಯಗಳಿಗೆ ಹಂಚಿಕೆಯ ಬಗ್ಗೆ ಸತತ ಮೂರನೇ ದಿನವಾದ ಶುಕ್ರವಾರದಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

* ಡೇರಿ ಉತ್ಪನ್ನದ ಗುಣಮಟ್ಟ ಹೆಚ್ಚಳಕ್ಕೆ ರೂ.15 ಸಾವಿರ ಕೋಟಿ:
ಡೇರಿ ಉತ್ಪನ್ನಗಳಿಗೆ ಗುಣಮಟ್ಟ ಹೆಚ್ಚಳಕ್ಕೆ 15 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ. ಪಶುಗಳ ರೋಗನಿರೋಧಕತೆ ಹೆಚ್ಚಿಸುವ ಲಸಿಕೆ ಹಾಕಲು 13,343 ಕೋಟಿ. 53 ಕೋಟಿ ಪಶುಗಳಿಗೆ ಲಸಿಕೆ ಗುರಿ ಹೊಂದಲಾಗಿದೆ. ಮಿಲ್ಕ್ ಪೌಡರ್, ಚೀಸ್, ಮೊದಲಾದ ಡೇರಿ ಉತ್ಪನ್ನಗಳ ಗುಣಮಟ್ಟಕ್ಕೆ ಒತ್ತು.

* ಮೀನುಗಾರರಿಗೆ 20 ಸಾವಿರ ಕೋಟಿ ರೂ. ಮೀಸಲು:
ಜೇನು ಸಾಕಣೆಗೆ 500 ಕೋಟಿ ರೂಪಾಯಿ ಮೀಸಲು. 2 ಲಕ್ಷ ಜೇನು ಉತ್ಪಾದಕರಿಗೆ ಅನುಕೂಲ. ಮೀನುಗಾರರ ಉಪಕರಣಗಳ ಖರೀದಿಗೂ ಕೇಂದ್ರ ಸರಕಾರ ನೆರವು ನೀಡಲಿದೆ. ಮೀನುಗಾರರಿಗೆ 20 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ. ಕ್ಲಸ್ಟರ್ ಆಧಾರಿತ ಕೃಷಿಗೆ 10 ಸಾವಿರ ಕೋಟಿ ನೀಡಿದ್ದಾರೆ. ಔಷಧೀಯ ಸಸ್ಯಗಳ ಕೃಷಿ ಉತ್ತೇಜನಕ್ಕೆ 4 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ.

* ರಾಗಿ ಇನ್ನು ಗ್ಲೋಬಲ್ ಬ್ರ್ಯಾಂಡಿಂಗ್
ಕರ್ನಾಟಕದ ರಾಗಿಗೆ ಇನ್ಮುಂದೆ ಗ್ಲೋಬಲ್ ಬ್ರ್ಯಾಂಡಿಂಗ್ ದೊರೆಯಲಿದೆ. ಬ್ರ್ಯಾಂಡಿಗ್ ಮೂಲಕವೇ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿದೆ.

*ತರಕಾರಿ ಸಂಗ್ರಹಣೆಗೆ ರೂ.500 ಕೋಟಿ ಮೀಸಲು, ಗಿಡಮೂಲಿಕೆ ಕೃಷಿ ಉತ್ತೇಜನಕ್ಕೆ ನಾಲ್ಕು ಸಾವಿರ ಕೋಟಿ ರೂಪಾಯಿ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.