ದುಬೈಯಿಂದ ಬಂದ ಸೋಂಕಿತರ ಅಕ್ಕಪಕ್ಕದಲ್ಲಿದ್ದವರ ಮೇಲೂ ನಿಗಾ : ಡಿ.ಸಿ. ಸಿಂಧೂ.ಬಿ ರೂಪೇಶ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
  • ಸುರತ್ಕಲ್ ಪ್ರದೇಶ ಕಂಟೈನ್ಮೆಂಟ್ ವಲಯವೆಂದ ಜಿಲ್ಲಾಧಿಕಾರಿ

ಮಂಗಳೂರು: ಕಳೆದ ಮಂಗಳವಾರ (ಮೇ 12) ದುಬೈನಿಂದ ವಿಮಾನದಲ್ಲಿ ಬಂದ 179 ಮಂದಿ ಪ್ರಯಾಣಿಕರಲ್ಲಿ 15 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣದ ವೇಳೆ ಅವರ ಬಳಿ ಕುಳಿತಿದ್ದವರನ್ನೂ ಕೂಡ ತಪಾಸಣೆ ಮಾಡಿ ಅವರ ಮೇಲೆ ನಿಗಾ ಇಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ.ಬಿ ರೂಪೇಶ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದುಬೈನಲ್ಲಿ ಪ್ರಯಾಣಿಕರನ್ನು ಕಳುಹಿಸುವಾಗ ಕೇವಲ ಸ್ಕ್ರೀನಿಂಗ್ ಪರೀಕ್ಷೆ ಮಾತ್ರ ಮಾಡುತ್ತಾರೆ. ಯಾವುದೇ ರೀತಿಯ ಟೆಸ್ಟ್‍ಗಳನ್ನು ಮಾಡಿರುವುದಿಲ್ಲ. ಮುಂದಿನ ಬಾರಿಯ ವಿಮಾನದಲ್ಲಿ ಪ್ರಯಾಣಿಸುವವರ ಸಂಪೂರ್ಣ ಪರೀಕ್ಷೆ ಮಾಡಬೇಕಾಗುವ ಬಗ್ಗೆ ಸರ್ಕಾರದ ಜೊತೆ ಮಾತುಕತೆ ಮಾಡಲಾಗುವುದು ಎಂದು ಹೇಳಿದರು.

ಸುರತ್ಕಲ್ ಕಂಟೈನ್‍ಮೆಂಟ್ ವಲಯ:
ಮೇ 12ರಂದು 179 ಮಂದಿ ಪ್ರಯಾಣಿಕರು ವಿಮಾನದಲ್ಲಿ ಬಂದಿದ್ದು, 125 ಮಂದಿ ಮಂಗಳೂರು ನಗರದ ಹತ್ತು ಹೋಟೆಲ್ ಗಳಲ್ಲಿ ಕ್ವಾರೆಂಟೈನ್ ನಲ್ಲಿದ್ದಾರೆ. 15 ಮಂದಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಉಳಿದಂತೆ ಸುರತ್ಕಲ್ ಮೂಲದ ಮಹಿಳೆಯೊಬ್ಬರಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಇವರಿಗೆ ಯಾವ ಮೂಲದಿಂದ ಸೋಂಕು ಹರಡಿದೆ ಎಂದು ಇನ್ನೂ ಖಚಿತವಾಗಿಲ್ಲ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರಲ್ಲಿ ತೀವ್ರ ಉಸಿರಾಟ ಸಮಸ್ಯೆ ಕಂಡು ಬಂದು ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ. ಆದ್ದರಿಂದ ಸುರತ್ಕಲ್ ಪ್ರದೇಶವನ್ನು ಕಂಟೈನ್ಮೆಂಟ್ ಮಾಡಲಿದ್ದೇವೆ ಎಂದರು.

ದುಬೈನಿಂದ ಆಗಮಿಸಿದವರ ಪೈಕಿಯಲ್ಲಿ ಒಂದೇ ಕುಟುಂಬದ ಮೂವರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಅದರಲ್ಲಿ 45 ವರ್ಷದ ಪತಿ, 33 ವರ್ಷದ ಪತ್ನಿ, 6 ವರ್ಷದ ಮಗುವಿಗೆ ಸೋಂಕು ತಗುಲಿದೆ ಎಂದರು. ಈ ವಿಮಾನದಲ್ಲಿ 38 ಮಂದಿ ಗರ್ಭಿಣಿಯರು ಇದ್ದರು. ಆದರೆ ಇವರಲ್ಲಿ ಯಾರಿಗೂ ಪಾಸಿಟಿವ್ ಕಂಡು ಬಂದಿಲ್ಲ.

ಎರಡನೇ ವಿಮಾನ ಆಗಮನ:
ದುಬೈನಿಂದ ಮತ್ತೊಂದು ವಿಮಾನ ಮೇ 18ರಂದು ಮಂಗಳೂರಿಗೆ ಬರಲಿದೆ. ಇದರಲ್ಲಿ 171 ಮಂದಿ ಪ್ರಯಾಣಿಕರು ಮಂಗಳೂರಿಗೆ ಬರಲಿದ್ದಾರೆ ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಾಹಿತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.