HomePage_Banner_
HomePage_Banner_

ಪ್ರಧಾನಿ ಹೊಸ ಪ್ಯಾಕೇಜ್ ಬದಲು ರಾಜ್ಯ ಬರಬೇಕಾದ ಹಳೆ ಬಾಕಿ ನೀಡಲಿ: ಹರೀಶ್ ಕುಮಾರ್

ಬೆಳ್ತಂಗಡಿ: ಕೇಂದ್ರ ಸರಕಾರ ಜಿಎಸ್‌ಟಿ ಮತ್ತು 15 ನೇ ಹಣಕಾಸು ಯೋಜನೆಯಲ್ಲಿ ರಾಜ್ಯಕ್ಕೆ  ಕೊಡಬೇಕಾದ 11,215 ಕೋಟಿ ರೂ., ಅಂತೆಯೇ ನೆರೆ ಪರಿಹಾರದ ಸಂದರ್ಭ ಘೋಷಿಸಿದ್ದ 1800 ಕೋಟಿ ರೂ. ನಲ್ಲಿ ಇನ್ನೂ ರಾಜ್ಯಕ್ಕೆ ಹಣ ಬರಲು ಬಾಕಿ, ನರೇಗಾ ಯೋಜನೆಯಲ್ಲೂ ಹಣ ಬಾಕಿ ಇರುವಾಗ ಇದೀಗ ಮೋದಿ ಅವರು 20 ಲಕ್ಷ ಕೋಟಿ ರೂ. ಪೇಕೇಜ್ ಘೋಷಿಸಿರುವುದು ಈ ವರ್ಷ ದೊಡ್ಡ ಹಾಸ್ಯ ಎಂದು ವಿಧಾನ ಪರಿಷತ್ತು ಶಾಸಕರೂ ಆಗಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಲೇವಡಿ ಮಾಡಿದ್ದಾರೆ. 

ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ಮೇ. 13 ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ನೆರೆ ಬಂದ ಸಂದರ್ಭ ಬೇರೆ ಬೇರೆ ರಾಜ್ಯಗಳಿಗೆ 4-5 ಸಾವಿರ ಕೋಟಿ ರೂ.ಗಳನ್ನು ನೀಡಿದ್ದರೂ ನಮ್ಮ ರಾಜ್ಯಕ್ಕೆ ಹೇಳಿದ ಮೊತ್ತವನ್ನೇ ಕೇಂದ್ರ ಸರಕಾರ ಕೊಟ್ಟಿಲ್ಲ. 135 ಕೋಟಿ ಜನಸಂಖ್ಯೆಯಲ್ಲಿ 15-20 ಕೋಟಿ 5 ವರ್ಷಕ್ಕಿಂತ ಕೆಳಗಿನವರು, 10-20 ಕೋಟಿ ಜನ 80 ವರ್ಷ ಮೇಲ್ಪಟ್ಟವರು. ಉಳಿದದ್ದರಲ್ಲಿ 50 ಶೇ. ಶ್ರಮಿಕವರ್ಗದವರು ಮತ್ತು ಬಡವರು ಇದ್ದಾರೆ. ಈ 20 ಲಕ್ಷ ಕೋಟಿ ರೂ. ಗಳನ್ನು 50 ಕೋಟಿ ಜನರಿಗೆ ಹಂಚುವಾಗ ಜನರಿಗೆ ಎಷ್ಟೆಷ್ಟು ಲಕ್ಷಸಿಗಬಹುದೇನೋ. ಬಹುಶಃ ಇದು ಸಿಕ್ಕಿದರೆ ಈ ದೇಶದ ಜನ ಭಾಗ್ಯವಂತರು. ಹಿಂದಿನ 15 ಲಕ್ಷದ ಘೋಷಣೆ ಚುನಾವಣಾ ಜುಮ್ಲಾ ಆಗಿದೆ. ಇದು ಕೊರೊನಾ ಜುಮ್ಲಾ ಆಗದಿರಲಿ ಎಂದು ನಾನು ಭಾವಿಸುತ್ತೇನೆ ಎಂದರು.

ರಾಜ್ಯದಲ್ಲಿ 25 ಮಂದಿ ಸಂಸದರು ಇದ್ದರೂ ಪ್ರಧಾನಿ ಬಳಿ ಮಾತನಾಡಲು ಧೈರ್ಯ ಇಲ್ಲ. ರಾಜ್ಯದ ಕೃಷಿಕರಿಗೆ ಪ್ಯಾಕೇಜ್, ಕೊರೊನಾ ಸಂಕಷ್ಟದಲ್ಲಿ ರಾಜ್ಯಕ್ಕೆ ನೆರವಾಗಿ ಎಂದು ಯಾವ ಸಂಸದರೂ ಪ್ರಧಾನಿ ಅವರನ್ನು ಕೇಳುವ ಧೈರ್ಯ ತೋರುತ್ತಿಲ್ಲ. ರೈತವರ್ಗ ಸಂಕಷ್ಟದಲ್ಲಿರುವಂತೆ ಅವರಿಗೆ ರಸಗೊಬ್ಬರಕ್ಕೆ ಇಟ್ಟಿದ್ದ 22,186 ಕೋಟಿ ರೂ. ಸಬ್ಸಿಡಿ ಕಡಿತ ಮಾಡಿದ್ದಾರೆ. ವಿಶೇಷ ಪ್ಯಾಕೇಜ್ ಕೊಡುವ ಬದಲು ಕಸಿದುಕೊಂಡಿದೆ. ತುಟ್ಟಿ 37,500 ಕೋಟಿ ರೂ ತುಟ್ಟಿಭತ್ಯೆ ರದ್ದುಪಡಿಸಿದ್ದಾರೆ. ವಿದ್ಯುತ್ ಬಿಲ್ ಅಧಿಕ ವಸೂಲಿಗೆ ಇಳಿದಿದ್ದಾರೆ ಎಂದು ಆಪಾದಿಸಿದರು.

ಕೊರೊನಾ ಹರಡಲು ನಮಸ್ತೇ ಟ್ರಂಪ್ ಕಾರ್ಯಕ್ರಮ ಕಾರಣ
ಫೆ. 24 ರಂದು ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ 1 ಲಕ್ಷ 25 ಸಾವಿರ ಜನ ಭಾಗವಹಿಸಿದ್ದರು. ಇದರಲ್ಲಿ ಟ್ರಂಪ್ ಭದ್ರತೆಯ ಸಿಬ್ಬಂದಿ ಸೇರಿದಂತೆ 20 ಸಾವಿರ ಮಂದಿ ವಿದೇಶಿಗರಿದ್ದರು. ಆ ಕಾರ್ಯಕ್ರಮ ನಡೆಯುವ ವೇಳೆ ಅಮೆರಿಕದಲ್ಲಿ ಕೊರೊನಾ ವ್ಯಾಪಕ ಹಬ್ಬಿತ್ತು. ಕಾರ್ಯಕ್ರಮ ನಡೆದ ಗುಜರಾತ್ ಮತ್ತು ಅದರ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬಲು ಈ ಕಾರ್ಯಕ್ರಮವೇ ಕಾರಣ ಎಂದು ಹರೀಶ್ ಕುಮಾರ್ ಆರೋಪಿಸಿದರು. ಇದನ್ನು ಮರೆಮಾಚಿ ತಬ್ಲಿಘಿ, ನಿಜಾಮುದ್ದೀನ್ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ಅಹಮದಾಬಾದ್ ನಗರ, ವುಹಾನ್, ಅಮೇರಿಕಾ, ಇಟೆಲಿ, ಜರ್ಮನಿ ಮೊದಲಾದಕಡೆ ಸಾವಿರಾರು ಜನ ಕೊರನಾದಿಂದ ಸಾವನ್ನಪ್ಪಿದ್ದಾರೆ. ಅಲ್ಲಿ ತಬ್ಲೀಘಿ ಆಗಿದೆಯೇ ಎಂದು ಪ್ರಶ್ನಿಸಿದ ಅವರು, ಐಪಿಎಲ್ ಮುಂದೂಡಿದ ದೆಹಲಿ ಮತ್ತು ಕೇಂದ್ರ ಸರಕಾರ ತಬ್ಲೀಘಿ ಸಮಾವೇಶ ನಿಲ್ಲಿಸಬಹುದಿತ್ತು. ಆದರೆ ಇದೀಗ ಸತ್ಯ ಮುಚ್ಚಿಟ್ಟು ಜನರ ಭಾವನೆ ಕೆರಳಿಸುವ ದುಷ್ಟ ವ್ಯವಹಾರಕ್ಕೆ ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಆದ್ದರಿಂದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ಮಧ್ಯಪ್ರವೇಶಿಸಿ ತನಿಖೆ ನಡೆಸಿ ಅಂಕಿ ಅಂಶವನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.