ಗೋಳಿಕಟ್ಟೆ ಶೀನ‌ ಆಚಾರ್ಯ ನಿಧನ

ನಾವರ : ಅಳದಂಗಡಿ ಗೋಳಿಕಟ್ಟೆ ನಾವರ ಗ್ರಾಮದ ಶೀನ ಆಚಾರ್ಯ (76ವ) ಉಸಿರಾಟದ ತೊಂದರೆಯಿಂದ ಮೇ.12 ರಂದು ನಿಧನರಾದರು.
ಮೃತರ ಪತ್ನಿ ಸುಮಿತ್ರ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ವಾಸವಾಗಿದ್ದು ಇವರ ಅನಾರೋಗ್ಯದ ಬಗ್ಗೆ ತಿಳಿದು 7 ದಿನಗಳ ಹಿಂದೆ ಊರಿಗೆ ವಾಪಾಸಾಗಿದ್ದರು.

ಪತ್ನಿ ಸುಮಿತ್ರ ಈಗ ಹೋಮ್ ಕ್ವಾರೆಂಟೈನ್ ನಲ್ಲಿದ್ದು ಮೃತರ ದೇಹವನ್ನು‌ ಕೊರೋನಾ ಟೆಸ್ಟ್ ಗಾಗಿ ಬೆಳ್ತಂಗಡಿಯ ಆಸ್ಪತ್ರೆಗೆ ತರಲಾಗಿದ್ದು ಕೊರೊನಾ ಟೆಸ್ಟ್ ನ ವರದಿಗಾಗಿ ಕುಟುಂಬ ಕಾಯುತ್ತಿದೆ.

ಮೃತ ಶೀನ ಬಿ.ಪಿ ಯಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮೃತರು ಪತ್ನಿ ಸುಮಿತ್ರ ಪುತ್ರರಾದ ರಾಘವೇಂದ್ರ ಆಚಾರ್ಯ, ಮಾಧವ ಆಚಾರ್ಯ, ಪುತ್ರಿಯರಾದ ಶೋಭ, ವಿಜಯ, ಸುಜಯ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.