HomePage_Banner_
HomePage_Banner_
HomePage_Banner_

20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ ಮೋದಿ ಮೇ.18 ರಿಂದ ಹೊಸ ಲಾಕ್ ಡೌನ್ ಘೋಷಣೆ

ಬೆಳ್ತಂಗಡಿ :  ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಹೊಸ ಪ್ಯಾಕೇಜ್ ಘೊಷಣೆ ಮಾಡಿದ್ದಾರೆ. ‘ಆತ್ಮ ನಿರ್ಭರ್ ಭಾರತ್ ಅಭಿಯಾನ್’ ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ದೇಶದ ಅಭಿವೃದ್ಧಿಗೆ 20 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜನ್ನು ಪ್ರಧಾನಿ ಘೊಷಣೆ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಭಾರತದ ಅಭಿವೃದ್ಧಿಗೆ ಈ ಪ್ಯಾಕೇಜ್ ಹೊಸ ದಿಕ್ಕು ತೋರಲಿದೆ. ದೇಶದ ಶ್ರಮಿಕರಿ, ದೇಶದ ಕೃಷಿಕರಿಗೆ, ಸಣ್ಣ ಉದ್ಯಮಗಳಿಗೆ ಈ ಪ್ಯಾಕೇಜ್ ನೆರವಾಗಲಿದೆ ಎಂದು ಪ್ರಧಾನಿಗಳು ಘೊಷಣೆ ಮಾಡಿದ್ದಾರೆ.

ಈ ಅನುದಾನ ಯಾರಿಗೆಲ್ಲ ಸಿಗಲಿದೆ, ಯಾವೆಲ್ಲ ಕ್ಷೇತ್ರಕ್ಕೆ ಸಿಗಲಿವೆ ಎಂಬ ಬಗ್ಗೆ ಶಿಘ್ರದಲ್ಲೇ ಅರ್ಥಸಚಿವರು ವಿವರಗಳನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೇ.18 ರಿಂದ ಹೊಸ ಲಾಕ್ ಡೌನ್ ವಿಸ್ತರಣೆ

ದೇಶದೆಲ್ಲೆಡೆ ಮೇ 18ರಿಂದ ಹೊಸ ಲಾಕ್ ಡೌನ್ ನಿಯಮಗಳನ್ನು ಘೋಷಣೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ನಾಲ್ಕನೇ ಹಂತದ ಲಾಕ್ ಡೌನ್ ಬಗ್ಗೆ ಹೊಸ ನಿಯಮಗಳನ್ನು ರೂಪಿಸಲಾಗುವುದು. ಶಿಘ್ರದಲ್ಲೇ ಹೊಸ ನಿಯಮಗಳನ್ನು ಘೋಷಿಸಲಾಗುವುದು. ಮತ್ತಷ್ಟು ಹೊಸ ತನದೊಂದಿಗೆ ಹೊಸ ನಿಯಮಗಳು ಜಾರಿಗೆ ಬರಲಿದೆ.

ನಾಲ್ಕನೇ ಹಂತದ ಲಾಕ್ ಡೌನ್ ಹೊಸ ನಿಯಮಗಳಿಂದ ಕೂಡಿರಲಿದೆ. ಮೇ 17ರೊಳಗೆ ಹೊಸ ನಿಯಮಗಳ ಘೋಷಣೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆದರೆ, ನಾಲ್ಕನೇ ಹಂತದ ಲಾಕ್ ಡೌನ್ ದೇಶದೆಲ್ಲೆಡೆ ಜಾರಿಯಾಗಲಿದೆಯಾ? ಏನೆಲ್ಲ ಹೊಸ ನಿಯಮಗಳಿವೆ ಈ ಬಗ್ಗೆ ಶೀಘ್ರವೇ ಘೋಷಣೆ ಮಾಡಲಾಗುವುದು ಎಂದು ಅವರು ಘೋಷಣೆ ಮಾಡಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.