HomePage_Banner_
HomePage_Banner_
HomePage_Banner_

ಫಸ್ಟ್ ನ್ಯೂರೋ ಸಂಪರ್ಕದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೋವಿಡ್-19 ಸೋಂಕು ದೃಢ

Advt_NewsUnder_1

 

ಉಡುಪಿ ಮೂಲದ 50 ವರ್ಷದ ಮಹಿಳೆ ಹಾಗೂ 26 ವರ್ಷದ ಯುವಕನಿಗೆ ಕೊರೊನಾ ವೈರಸ್ ಪಾಸಿಟಿವ್

ಬೆಳ್ತಂಗಡಿ: ಕೊರೊನಾ ವೈರಸ್ ಹಾಟ್‍ಸ್ಪಾಟ್ ಆಗಿರುವ ಮಂಗಳೂರಿನ ಪಡೀಲು ಬಳಿಯಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 507 ಸೋಂಕಿತರ ಸಂಪರ್ಕದಿಂದ ಉಡುಪಿ ಮೂಲದ 50 ವರ್ಷದ ಮಹಿಳೆಗೆ ಹಾಗೂ 26 ವರ್ಷದ ಪುರುಷನಿಗೆ ಕೊರೊನಾ ವೈರಸ್ ತಗುಲಿದೆ. ಮಂಗಳೂರಿನ

ಈ ಇಬ್ಬರು ಕೂಡ ಮಂಗಳೂರಿನಲ್ಲಿ ಕ್ವಾರಂಟೈನ್‍ನಲ್ಲಿದ್ದರು. ದ.ಕ ಜಿಲ್ಲೆಯಲ್ಲಿ ಕ್ವಾರೆಂಟೈನ್ ಗೆ ಒಳಗಾಗಿದ್ದ ಉಡುಪಿ ಮೂಲದ ಇಬ್ಬರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇಬ್ಬರು ರೋಗಿಗಳಾಗಿದ್ದು, ಫಸ್ಟ್ ನ್ಯೂರೋ ಆಸ್ಪತ್ರೆ ಸೀಲ್ ಡೌನ್ ಆದ ಬಳಿಕ ಮಂಗಳೂರಿನಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಹೀಗಾಗಿ ಈ ಇಬ್ಬರು ಸೋಂಕಿತರು ಉಡುಪಿ ಮೂಲದವರಾದರೂ ದ.ಕ ಜಿಲ್ಲೆಯ ಕೊರೊನಾ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.

ರಾಜ್ಯದಲ್ಲಿ ಇಂದು ಬೆಳಗಿನ ವರದಿಯಲ್ಲಿ 42 ಜನರಿಗೆ ಪಾಸಿಟವ್ ವರದಿ ಬಂದಿದ್ದು .ಈ ಮೂಲಕ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣವು ಒಟ್ಟು 904ಕ್ಕೆ ಏರಿಕೆಯಾಗಿದೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.