ವೇಣೂರು: ಶಾಲೆ, ಹಾಸ್ಟೇಲ್‌ಗಳು ಕ್ಯಾರಂಟೈನ್ ಕೇಂದ್ರ ನಾರಾವಿ ಜಿಲ್ಲಾ ಗಡಿ ಭಾಗದಲ್ಲಿ ಬಿಗಿಗೊಂಡ ತಪಾಸಣೆ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸಿರುವ ಉದ್ಯೋಗಿಗಳು ಹಾಗೂ ಕಾರ್ಮಿಕರನ್ನು ವಿವಿಧ ಶಾಲೆ ಹಾಗೂ ಹಾಸ್ಟೇಲ್‌ಗಳಲ್ಲಿ ಕ್ವಾರಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.


ವೇಣೂರು, ಹೊಸಂಗಡಿ, ಆರಂಬೋಡಿ, ಗುಂಡೂರಿ, ನಾರಾವಿ, ಅಳದಂಗಡಿ ಹಾಗೂ ಗರ್ಡಾಡಿ ಪರಿಸರದ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಹಾಸ್ಟೇಲ್‌ಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಉಪಯೋಗಿಸಲಾಗಿದೆ.
ದ.ಕ.-ಉಡುಪಿ ಜಿಲ್ಲೆಯ ಗಡಿಭಾಗವಾದ ನಾರಾವಿಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂತರ್ ಜಿಲ್ಲೆಗೆ ಪ್ರಯಾಣ ಬೆಳೆಸುವವರು ಸ್ವಯಂ ಘೋಷಣೆ ಪ್ರತಿಯನ್ನು ತುಂಬಬೇಕಿದ್ದು, ಸ್ಥಳದಲ್ಲೇ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲದೆ ಹೋಮ್ ಕ್ವಾರಂಟೈನ್‌ಗೆ ಸೂಚಿಸಲಾಗುತ್ತದೆ. ಗಡಿಭಾಗದ ಮೂಲಕ ಜಿಲ್ಲೆಗೆ ಆಗಮಿಸಿ ಯಾರ ಸಂಪರ್ಕಕ್ಕೂ ಬಾರದಿರುವಂತೆ ಸೂಚಿಸಲಾಗುತ್ತದೆ. ನೀವು ಬೇರೆ ಜಿಲ್ಲೆಗೆ ಹೋಗಿಬರುವ ಪಾಸ್ ಮಾಡಿಕೊಂಡಿದ್ದು, ವಾಪಸಾಗುವಾಗ ವಿಳಂಬವಾದರೆ ನೀವು ಭೇಟಿಯಾಗಿರುವ ಎಲ್ಲಾ ವ್ಯಕ್ತಿಗಳನ್ನು 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ.

ಕ್ವಾರಂಟೈನ್ ಕೇಂದ್ರಕ್ಕೆ ವೇಣೂರಿನಲ್ಲಿ ವಿರೋಧ!
ವೇಣೂರು ಭಾಗದ ವಿದ್ಯಾರ್ಥಿನಿ ನಿಲಯವೊಂದನ್ನು ಕ್ವಾರೆಂಟೈನ್ ಸೆಂಟರ್ ಆಗಿ ಗುರುತಿಸಲಾಗಿದ್ದು, ಆದರೆ ವೇಣೂರಿನ ಕೆಲ ಪ್ರಮುಖರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಸತಿ ನಿಲಯವು ಪೇಟೆಗೆ ಹೊಂದಿಕೊಂಡಿದೆ. ಅನಕ್ಷರಸ್ಥ ಕೃಷಿಕರ ಹಳ್ಳಿಗೆ ಕೊರೊನಾದಂತಹ ಶಂಕಿತ ಮಹಾಮಾರಿಯ ಪ್ರವೇಶಕ್ಕೆ ಅನುವು ಮಾಡಿಕೊಡುವುದನ್ನು ಖಂಡಿಸುತ್ತೇವೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಅವರು ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.