ಮತ್ತೆ ನಿಮಾ೯ಣವಾದ ಅನಧಿಕೃತ ಅಂಗಡಿ: ಆಡಳಿತಾಧಿಕಾರಿ ಉಪಸ್ಥಿಯಲ್ಲಿ ತೆರವು

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ನಗರದಲ್ಲಿ ಅನಧಿಕೃತವಾಗಿ ಚಪ್ಪರ ಹಾಕಿ ವ್ಯಾಪರ ನಡೆಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಿದ್ದನ್ನು ವಿರೋಧಿಸಿ ಎ.11ರಂದು ಬೆಳಗ್ಗೆ ಕಾಂಗ್ರೆಸ್ ನೇತೃತ್ವದಲ್ಲಿ ನ.ಪಂ ಎದುರು ಪ್ರತಿಭಟನೆ ನಡೆಸಿದ, ಹಾಗೂ ಸಂಜೆಯೊಳಗೆ ವ್ಯಾಪಾರಿಗಳು ಮತ್ತೆ ಅದೇ ಸ್ಥಳದಲ್ಲಿ ಚಪ್ಪರ ನಿರ್ಮಿಸಿರುವುದನ್ನು ಆಡಳಿತಾಧಿಕಾರಿಗಳ ಉಪಸ್ಥಿತಿಯಲ್ಲಿ ತೆರವುಗೊಳಿಸಿದ ವಿದ್ಯಾಮಾನ ಇಂದು ಬೆಳ್ತಂಗಡಿಯಲ್ಲಿ ನಡೆಯಿತು.
ಬೆಳ್ತಂಗಡಿ ಹಳೆಕೋಟೆ ಮತ್ತು ಬೆಳ್ತಂಗಡಿ ಬಸ್‍ನಿಲ್ದಾಣದ ಬಳಿಯಲ್ಲಿ ಚಪ್ಪರ ಹಾಕಿ ಅನಧಿಕೃತವಾಗಿ ಹಣ್ಣು ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ಮೇ.10ರ ರಾತ್ರಿ ನಗರ ಪಂಚಾಯತು ವತಿಯಿಂದ ತೆರೆವುಗೊಳಿಸಿ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗಿತ್ತು. ಇದನ್ನು ವಿರೋಧಿಸಿ ಎ.11ರಂದು ಕಾಂಗ್ರೆಸ್ ನೇತೃತ್ವದಲ್ಲಿ ನಗರ ಪಂಚಾಯತು ಎದುರು ಪ್ರತಿಭಟನೆ ನಡೆಸಲಾಗಿತ್ತು.


ನಂತರದ ಬೆಳವಣಿಗೆಯಲ್ಲಿ ಸಂಜೆಯಾಗುತ್ತಿದ್ದಂತೆ ವ್ಯಾಪಾರಿಗಳು ಅದೇ ಸ್ಥಳದಲ್ಲಿ ಮತ್ತೆ ಚಪ್ಪರ ಹಾಕಿ ವ್ಯಾಪಾರಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸಿದರು. ಇದನ್ನು ತಿಳಿಸಿದ ಆಡಳಿತಾಧಿಕಾರಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ಮುಖ್ಯಾಧಿಕಾರಿ ಸುಧಾಕರ್ ಅವರ ಉಪಸ್ಥಿತಿಯಲ್ಲಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ, ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.