ಕ್ವಾರಂಟೈನ್‍ನಲ್ಲಿದ್ದ ಮನೆಗೆ ಪ್ರವೇಶಿಸಿ ಕೆಲಸ ಮಾಡಿದ ಇಲೆಕ್ಟ್ರೀಷಿಯನ್‍ಗೆ ಹೋಮ್ ಕ್ವಾರಂಟೈನ್

ನೆರಿಯ: ಇಲ್ಲಿಯ ಗಂಡಿಬಾಗಿಲು ಎಂಬಲ್ಲಿ ಕ್ವಾರಂಟೈನ್ ನಿಗಾವಣೆ ಯಲ್ಲಿದ್ದ ಕುಟುಂಬದ ಮನೆಯೊಳಗೆ ಹೋಗಿ ಕೆಲಸ ನಿರ್ವಹಿಸುತ್ತಿದ್ದ ಇಲೆಕ್ಟ್ರೀಷಿಯನ್ ಒಬ್ಬರನ್ನು ಆರೋಗ್ಯ ಇಲಾಖೆ ಮತ್ತು ಗ್ರಾಮ ಟಾಸ್ಕ್ ಸಮಿತಿ ಪತ್ತೆ ಹಚ್ಚಿ ಹೋಮ್ ಅದೇ ಮನೆಯಲ್ಲಿ ಕ್ವಾರಂಟೈನ್‍ಗೆ ಒಳಪಡಿಸಿದ ಘಟನೆ ಮೇ.11ರಂದು ನಡೆದಿದೆ.

ಹೋಮ್ ಕ್ವಾರಂಟೈನ್ ನಿಗಾವಣೆಯಲ್ಲಿರುವ ಮನೆಯ ಒಳಗೆ ಪ್ರವೇಶಿಸಿ, ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ (ಸುರಕ್ಷಾ ಸಾಧನ) ಮತ್ತು ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿಯನ್ನು ನೀಡದ ಇಲೆಕ್ಟ್ರೀಶಿಯನ್ ಇಲೆಕ್ಟ್ರಿಕಲ್‍ಗೆ ಸಂಬಂಧ ಪಟ್ಟ ಕೆಲಸವನ್ನು ಮಾಡುತ್ತಿದ್ದ, ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಆರೋಗ್ಯ ಇಲಾಖೆ ಮತ್ತು ಗ್ರಾಮ ಟಾಸ್ಕ್ ಸಮಿತಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದಾಗ ಆತ ಕೆಲಸ ಮಾಡಿಕೊಂಡಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಯುವಕನನ್ನು ಅದೇ ಮನೆಯಲ್ಲಿ 14 ದಿನಗಳ ಹೋಮ್ ಕ್ವಾರಂಟೈನ್‍ಗೆ ಒಳಪಡಿಸಿ ಸೀಲ್ ಹಾಕಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.