ವೇಣೂರು ಗ್ರಾ.ಪಂ. ಆಡಳಿತದಲ್ಲಿ ಬಿರುಕು ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆ

Advt_NewsUnder_1
Advt_NewsUnder_1

ವೇಣೂರು: ವೇಣೂರು ಗ್ರಾಮ ಪಂಚಾಯತ್‌ನ ಆಡಳಿತ ವ್ಯವಸ್ಥೆಗೆ ಸಂಬಂಧಿಸಿ ಮೇ. 11 ರಂದು ಭಾರೀ ರಾಜಕೀಯ ಬೆಳವಣಿಗೆಯೊಂದು ನಡೆದು ಹೋಗಿದೆ.

ವೇಣೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಮೋಹಿನಿ ವಿಶ್ವನಾಥ ಶೆಟ್ಟಿ ಅವರ ಆಡಳಿತ ವ್ಯವಸ್ಥೆಯಿಂದ ಬೇಸತ್ತಿರುವ ಗ್ರಾ.ಪಂ.ನ ಎಲ್ಲಾ 23 ಸದಸ್ಯರು ಪುತ್ತೂರು ಸಹಾಯಕ ಆಯುಕ್ತರಾದ ಡಾ| ಯತೀಶ್ ಉಳ್ಳಾಲ್ ಅವರಿಗೆ ಅವಿಶ್ವಾಸ ಗೊತ್ತುವಳಿ ಮಂಡನೆ ಅರ್ಜಿ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬಂದಂತಾಗಿದೆ.

2016ರಲ್ಲಿ ನಡೆದ ವೇಣೂರು ಗ್ರಾ.ಪಂ.ಗೆ ಚುನಾವಣೆಗೆ ಬಿಜೆಪಿ ಬೆಂಬಲಿತ 14 ಮಂದಿ ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ 10 ಮಂದಿ ಸದಸ್ಯರು ಚುನಾಯಿತರಾಗಿದ್ದರು. ಹಿಂದುಳಿದ ವರ್ಗ ಬಿ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದ ಕಾರಣ ಬಿಜೆಪಿ ಬೆಂಬಲಿತ ಸದಸ್ಯೆ ಮೋಹಿನಿ ವಿಶ್ವನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿತ್ತು.

ಅವಿಶ್ವಾಸ ಮಂಡನೆಗೆ ತೆರಳಿದ ನಿಯೋಗದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಸದಸ್ಯರಾದ ಲೋಕಯ್ಯ ಪೂಜಾರಿ, ರಾಜೇಶ್ ಪೂಜಾರಿ ಮೂಡುಕೋಡಿ, ಯಶೋಧರ ಹೆಗ್ಡೆ, ಹರೀಶ್ ಪಿ.ಎಸ್., ಲಕ್ಷ್ಣ ಪೂಜಾರಿ, ರೊನಾಲ್ಡ್ ಡಿಸೋಜ, ಗ್ರಾ.ಪಂ. ನೀರು ಮತ್ತು ನೈರ್ಮಲ್ಯ ಸಮಿತಿಯ ಅನೂಪ್ ಜೆ. ಪಾಯಸ್ ಉಪಸ್ಥಿತರಿದ್ದರು.

ಅವಿಶ್ವಾಸ ಮಂಡನೆಗೆ 13 ಮಂದಿ ಬಿಜೆಪಿ ಹಾಗೂ 10 ಮಂದಿ ಕಾಂಗ್ರೇಸ್ ಸದಸ್ಯರು ಸಹಿ ಹಾಕಿದ್ದರು.

ನಾನೇನು ತಪ್ಪು ಮಾಡಿಲ್ಲ- ಮೋಹಿನಿ ಶೆಟ್ಟಿ ವೇಣೂರು ಗ್ರಾ.ಪಂ ಅಧ್ಯಕ್ಷೆ


ಸದಸ್ಯರು ಅವಿಶ್ವಾಸ ಮಂಡನೆ ಮಾಡಿರುವ ಬಗ್ಗೆ ನನಗೇನು ಮಾಹಿತಿ ಇಲ್ಲವಾಗಿದೆ. ನಾನು ನನ್ನ ಅಧಿಕಾರವಧಿಯಲ್ಲಿ ಯಾವುದೇ ಅವ್ಯವಹಾರ ಅಥವಾ ಭ್ರಷ್ಟಾಚಾರ ಮಾಡಿಲ್ಲ. ಪರಿಚಯ ಇಲ್ಲದ ಗುತ್ತಿಗೆದಾರರೊಬ್ಬರ ಹಣ ಪಾವತಿಗೆ ಮುಖ ನೋಡದೆ ಚೆಕ್‌ಗೆ ಸಹಿ ಹಾಕಲು ನಿರಾಕರಿಸಿದ್ದಕ್ಕೆ ನಡ್ತಿಕಲ್ಲು ಗ್ರಾಮಸ್ಥ ಉಮೇಶ್ ಎಂಬಾತ ಅವಾಚ್ಯವಾಗಿ ನಿಂದಿಸಿದ್ದ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೆ. ಈ ಘಟನೆ ಸದಸ್ಯರ ಅವಿಶ್ವಾಸ ಮಂಡನೆಗೆ ಕಾರಣ ಆಗಿರಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.