ಕಳಿಯ 50 ಬಡ ಕುಟುಂಬಕ್ಕೆ ಪಂಚಾಯತು ಸದಸ್ಯ ಅಕ್ಕಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಕಳಿಯ : ಇಲ್ಲಿಯ ಗ್ರಾಮ ಪಂಚಾಯತು 3 ನೇ ವಿಭಾಗದ ಗೋವಿಂದೂರು,ಜಾರಿಗೆ ಬೈಲು,ಹೇರೋಡಿ ಪರಿಸರದ ಸುಮಾರು 50 ಬಡ ಕುಟುಂಬಕ್ಕೆ ತಲಾ 10 ಕಿಲೋ ಕುಚ್ಚಲು ಅಕ್ಕಿ ಕಿಟ್ ವಿತರಣೆ ನಡೆಯಿತು.

ದೇಶದಲ್ಲಿ ಕೊರೊನಾ -19 ಲಾಕ್ ಡೌನ್ ಹಿನ್ನೆಲೆಯಲ್ಲಿ ಹಳ್ಳಿಯ ಬಡ ಕುಟುಂಬ ಹಾಗೂ ಜನತಾ ಕಾಲೋನಿ ನಿವಾಸಿ ಜನರು ಜೀವನ ಸಂಕಷ್ಟಕ್ಕೆ ಒಳಗಿದ್ದಾರೆ.ಇಂತಹ ಗಂಭೀರವಾದ ಪರಿಸ್ಥಿತಿಯನ್ನು ಗಮನಿಸಿ ಕಳಿಯ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ತುಕಾರಾಮ ಪೂಜಾರಿ ತನ್ನ ಸ್ವಂತ ಗಳಿಸಿದ ಆದಾಯದಲ್ಲಿ 50 ಕುಟುಂಬಕ್ಕೆ ತಲಾ 10 ಕಿಲೋ ಕುಚ್ಚಲು ಅಕ್ಕಿ ಪೊಟ್ಟಣ ವನ್ನು ಪ್ರಚಾರವಿಲ್ಲದೆ ವಿತರಣೆ ಮಾಡಿದರು.ಹಾಗೂ ಬಡವ, ಜಾತಿ, ಧರ್ಮದ ಯಾವುದೇ ರೀತಿಯ ಭೇದ ಭಾವವಿಲ್ಲದೇ ಎಲ್ಲಾ ಸಮುದಾಯದ ಜನರ ಕಷ್ಟದ ಸಮಯದಲ್ಲಿ ಭಾಗಿಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ಅನಿವಾರ್ಯವಾಗಿದೆ. ಎಲ್ಲರೂ ತಮ್ಮ ತಮ್ಮ ಮನೆಯಲ್ಲಿದ್ದು ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಮೂಲಕ ಮಕ್ಕಳ ಮತ್ತು ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವಂತೆ ಈ ಸಂದರ್ಭದಲ್ಲಿ ತಿಳಿಸಿದರು ಎಂದು ಕಿಟ್ ಪಡೆದ ಫಲಾನುಭವಿಗಳು ತಿಳಿಸಲು ಮರೆಯಲಿಲ್ಲ. ಪಂಚಾಯತು ಸದಸ್ಯರೋರ್ವರ ಸೇವೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.