ಬೆಳ್ತಂಗಡಿ ಕಸಬಾ ಗ್ರಾಮದ ಕೆಲ್ಲಗುತ್ತು ಬಡ ಕುಟುಂಬಗಳಿಗೆ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ರಿಂದ ಆಹಾರ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೋನಾ ಲಾಕ್ ಡೌನ್ ಹಳ್ಳಿಪ್ರದೇಶದ ಜನರನ್ನು ಮಾತ್ರ ಬಾಧಿಸದೆ ನಗರ ಪ್ರದೇಶದ ಬಡವರಿಗೂ ತಟ್ಟಿದೆ. ಬಡವ , ಮಧ್ಯಮ ವರ್ಗದ ಜನರು ಪ್ರಸ್ತುತ ತೀವ್ರ ಸ್ವರೂಪದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂಕಷ್ಟದ ಸ್ಥಿತಿಯನ್ನು ಆಧರಿಸಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ತನ್ನ ಸ್ವಂತ ಪರಿಶ್ರಮದಿಂದ ಬೆಳ್ತಂಗಡಿ ಕಸಬಾ ಗ್ರಾಮದ ಕೆಲ್ಲಗುತ್ತು ಎಂಬಲ್ಲಿ ಆಹಾರ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್ ಕುಮಾರ್ , ಕೊರೋನಾ ವೈರಸ್ ಲಾಕ್ ಡೌನ್ ಬಡವ, ಶ್ರೀಮಂತ, ಜಾತಿ, ಧರ್ಮದ ಯಾವುದೇ ಭೇದ ಭಾವವಿಲ್ಲದೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆಯಾದರೂ ಕೊರೋನಾ ವೈರಸ್ ತಡೆಗಟ್ಟಲು ಲಾಕ್ ಡೌನ್ ಅನಿವಾರ್ಯವಾಗಿದೆ , ಎಲ್ಲರೂ ತಮ್ಮ ತಮ್ಮ ಮನೆಯಲ್ಲಿದ್ದು ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷ ಕೆ. ಶೈಲೇಶ್ ಕುಮಾರ್, ತಾ.ಪಂ ಸದಸ್ಯ ಪ್ರವೀಣ್ ಗೌಡ ಕೊಯ್ಯೂರು , ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ , ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಕೆ ವಸಂತ್ , ಮಹಿಳಾ ಕಾಂಗ್ರೆಸ್ (ನಗರ) ಅಧ್ಯಕ್ಷೆ ಶ್ರೀಮತಿ ಹಾಜಿರ , ಮುಖಂಡರುಗಳಾದ ರಘು ಧರ್ಮಸೇನ್ , ಸತೀಶ್ ನಾಯ್ಕ್ ರೆಂಕೆದಗುತ್ತು , ಸತೀಶ್ ಶೆಟ್ಟಿ ದೊಡ್ಡಮನೆ , ಹರೀಶ್ ಜೈನ ಕೆಲ್ಲಗುತ್ತು , ಪ್ರೇಮ ದೇವಾಡಿಗ , ರೇಶ್ಮಾ ರೆಂಕೆದಗುತ್ತು, ಬಿ.ಕೆ ಯೋಗೀಶ್ ರೆಂಕೆದಗುತ್ತು, ರಿಕ್ಷಾ ಚಾಲಕ , ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ ಜೈನ ಮುಗುಳಿ , ಮಾಜಿ ಸೈನಿಕ ರಫೀಕ್ ಸಂಜಯ ನಗರ , ಶಾಂತಿರಾಜ್ ಜೈನ ಮುಗುಳಿ , ಲಕ್ಷ್ಮಣ ಪೂಜಾರಿ ಬಿರ್ಮಜಾಲು ವಲೇರಿಯನ್ ಕೊರೇಯಾ , ಲತಾ ಕೆಲ್ಲಗುತ್ತು , ಶರತ್ ಕುಮಾರ್ ಕೆಲ್ಲಗುತ್ತು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.