ತಾಲೂಕಿನ ಭತ್ತ ಬೆಳೆಗಾರರಿಗೆ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕಿನ ಭತ್ತ ಬೆಳೆಗಾರರಿಗೆ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅಪೇಕ್ಷಿತ ಸಾಮಾನ್ಯ ವರ್ಗದ ರೈತರು ಭತ್ತದ ಕೃಷಿ ಜಮೀನಿನ ಆರ್.ಟಿ.ಸಿ.(ಪಹಣಿ), ಆಧಾರ್ ಜೆರಾಕ್ಸ್ ಪ್ರತಿ ಹಾಗೂ ಪರಿಶಿಷ್ಠ ಜಾತಿ ಮತ್ತು ಪಂಗಡ ವರ್ಗದ ರೈತರ ಭತ್ತದ ಕೃಷಿ ಜಮೀನಿನ ಆರ್.ಟಿ.ಸಿ./ಪಹಣಿ, ಆಧಾರ್ ಪ್ರತಿ ಜೆರಾಕ್ಸ್ ಮತ್ತು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯ ಸಲ್ಲಿಸಬೇಕು.

ಎಂಒ 4 ಭತ್ತದ ತಳಿಯು ಬೆಳ್ತಂಗಡಿ ಹೋಬಳಿಯಲ್ಲಿ 40ಕ್ವಿಂಟಾಲ್ ದಾಸ್ತಾನಿದ್ದು, ಕೊಕ್ಕಡ, ವೇಣೂರು ಹೋಬಳಿಯಲ್ಲಿ ತಲಾ 15 ಕ್ವಿಂಟಾಲ್ ದಾಸ್ತಾನಿದೆ. ಪ್ರತಿ 25 ಕೆ.ಜಿ. ಯ ಚೀಲಕ್ಕೆ ನಿಗದಿತ ಬೆಲೆ ರೂ.800 ಸಾಮಾನ್ಯ ವರ್ಗದ ರೈತರಿಗೆ 200 ರೂ. ಸಹಾಯಧನ ನೀಡಿ 600 ರೂಪಾಯಿಯನ್ನು ರೈತರಿಂದ ಪಡೆಯಲಾಗುವುದು. ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ರೂ.300 ಸಹಾಯಧನ ನೀಡಿ ರೂ.500ನ್ನು ರೈತರಿಂದ ವಂತಿಗೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು:
* ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಬೆಳ್ತಂಗಡಿ – 8277931085
* ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕೊಕ್ಕಡ & ವೇಣೂರು – 8277931083
* ಸಹಾಯಕ ಕೃಷಿ ನಿರ್ದೇಶಕರು, ಬೆಳ್ತಂಗಡಿ – 8277931066

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.