ಸರಕಾರದ ವಿಶೇಷ ಸೌಲಭ್ಯಕ್ಕೆ ಛಾಯಾಗ್ರಾಹಕರ ಸೇಪ೯ಡೆ: ಸಚಿವ ಕೋಟ ಭರವಸೆ


ಬೆಳ್ತಂಗಡಿ:  ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಪದಾಧಿಕಾರಿಗಳು   ಮೇ 8ರಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿಯಾಗಿ ಸರಕಾರ ನೀಡುವ ವಿಶೇಷ ಸೌಲಭ್ಯದಡಿ ಛಾಯಾಗ್ರಾಹಕರನ್ನು ಸೇರ್ಪಡಿಸುವಂತೆ ಮನವಿ ಮಾಡಿದರು.

ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಆದಷ್ಟು ಶೀಘ್ರ ಸೇರ್ಪಡೆಗೆ ಪ್ರಯತ್ನಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಸ್ ಕೆಪಿಎ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ಸಂಚಾಲಕ ಅಶೋಕ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ನಾಗರಾಜ ರಾಯಪ್ಪನ ಮಠ, ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರ್, ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ರಾಜಾ ಮಠದಬೆಟ್ಟು ,ಅಮೃತ್ ಬೀಜಾಡಿ , ಪುಂಡಲೀಕ್ ಶಾನುಭೋಗ್, ಸಂತೋಷ್ ಕಾಪು ಹಾಗೂ ಸುಕೇಶ್ ಅಮೀನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.