ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಅತೀ ಶೀಘ್ರದಲ್ಲಿ “ಸೇವಾಸಿಂಧು” ವಿನಲ್ಲಿ ಅರ್ಜಿ ಸ್ವೀಕಾರ

Advt_NewsUnder_1
Advt_NewsUnder_1
Advt_NewsUnder_1

ರಾಜ್ಯ ಸರ್ಕಾರದಿಂದ ಆಟೋ ಹಾಗೂ ಟ್ಯಾಕ್ಸಿ ಚಾಲಕರುಗಳಿಗೆ ಪರಿಹಾರವಾಗಿ ರೂ 5,000/- ರೂಪಾಯಿಗಳನ್ನು ಘೋಷಿಸಿದ್ದು . ಈ ಪರಿಹಾರ ಧನವನ್ನು ಪಡೆಯಲು ಆಟೋರಿಕ್ಷಾ/ಟ್ಯಾಕ್ಸಿ ಚಾಲಕರುಗಳು ಪೋಸ್ಟ್ ಆಫೀಸ್‌ಗಳ ಎದುರಿಗೆ ಕ್ಯೂಗಳಲ್ಲಿ ನಿಂತು ಅರ್ಜಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ.

ಹಾಗಾಗಿ ಪರಿಹಾರ ಧನ ನೀಡಲು ಅರ್ಜಿಗಳನ್ನು ಆನ್‌ಲೈನ್‌ನಲ್ಲಿ “ಸೇವಾಸಿಂಧು” ಪೋರ್ಟ್ಲ್‌ ನ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆದ್ದರಿಂದ ಆಟೋರಿಕ್ಷಾ/ಟ್ಯಾಕ್ಸಿ ಚಾಲಕರುಗಳು ಅರ್ಜಿಗಳನ್ನು ಸಲ್ಲಿಸಲು ಅನಾವಶ್ಯಕವಾಗಿ ಪರಿಶ್ರಮ ಪಡುವ ಅವಶ್ಯಕತೆ ಇರುವುದಿಲ್ಲವೆಂದು ಈ ಮೂಲಕ ತಿಳಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಆಟೋ/ಟ್ಯಾಕ್ಸಿ ಚಾಲಕರುಗಳಿಗೆ ಪರಿಹಾರ ಧನವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು. ಆದ್ದರಿಂದ ಈ ಬಗ್ಗೆ ಯಾವುದೇ ಆಂತಕಕ್ಕೆ ಒಳಗಾಗಬಾರದೆಂದು ಎಂಬುದಾಗಿ ಸಾರಿಗೆ ಹಾಗು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಿಗುವ ವೆಬ್ ವಿಳಾಸ:  https://sevasindhu.karnataka.gov.in

 

ಈ ಯೋಜನೆ ಪಡೆಯಲು ಯಾವೆಲ್ಲಾ ಚಾಲಕರು ಅರ್ಹರಾಗಿದ್ದಾರೆ? ಮತ್ತು ಸರ್ಕಾರದ‌ ಷರತ್ತುಗಳೇನು ಎಂಬುದರ ಮಾಹಿತಿ ಇಲ್ಲಿದೆ.

*ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲನೆ ಮಾಡಲು ಚಾಲನಾ ಅನುಜ್ಞಾ ಪತ್ರ ಮತ್ತು ಬ್ಯಾಡ್ಜ್ ಹೊಂದಿರುವವರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

*ಫಲಾನುಭವಿಗಳು ದಿನಾಂಕ: 01-03-2020ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಸೇವಾಸಿಂಧು ಪೋರ್ಟಲ್​​​ನಲ್ಲಿ ನಮೂದಿಸಬೇಕು.

*ಚಾಲಕರ ಆಧಾರ್ ಕಾರ್ಡ್ ವಿವರ, ವಾಹನದ ನೋಂದಣಿ ಸಂಖ್ಯೆ ವಿವರಗಳನ್ನು ಪೋರ್ಟಲ್‌ನಲ್ಲಿ ನಮೂದಿಸಬೇಕು.

*ಚಾಲಕರ ಬ್ಯಾಂಕ್ ಅಕೌಂಟ್ ವಿವರ, ಸಂಬಂಧಪಟ್ಟ ಬ್ಯಾಂಕ್​​ನ IFSC ಕೋಡ್, MICR ಕೋಡ್‌ಗಳ ವಿವರಗಳನ್ನು ಸಹ ಪೋರ್ಟಲ್​ಗೆ ನೀಡಬೇಕು.

*ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಸಾರಿಗೆ ಇಲಾಖೆಯ ಸಾರಥಿ-4 ತಂತ್ರಾಂಶದಿಂದ ನೇರವಾಗಿ ಪಡೆದುಕೊಳ್ಳಬೇಕು.

*ಆಟೋರಿಕ್ಷಾ ಅಥವಾ ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು.

*ಈ ಯೋಜನೆಯನ್ನು ಜಾರಿಗೊಳಿಸಲು ಅರ್ಹ ಚಾಲಕರು ತಮ್ಮ ಅರ್ಜಿಗಳನ್ನು ಸೇವಾಸಿಂಧುವಿನ ಮುಖಾಂತರ ಸಲ್ಲಿಸಲು ವ್ಯವಸ್ಥೆ ಮಾಡಬೇಕಾಗಿರುತ್ತದೆ.

* ಈ ಬಗ್ಗೆ ಸೇವಾಸಿಂಧುವಿನಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಇ-ಆಡಳಿತ ಇಲಾಖೆಯನ್ನು ಕೋರಬಹುದಾಗಿದೆ.

*ಅರ್ಹ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯ ಮೂಲಕ ಪರಿಹಾರ ಹಣವನ್ನ DBT ಮಾಡಬೇಕು ಅಥವಾ ಆನ್‌ಲೈನ್ ಮೂಲಕ ಬ್ಯಾಂಕಿಗೆ ಜಮಾ ಮಾಡಬೇಕು.

*ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲು ಅನುವಾಗುವಂತೆ ಅರ್ಹ ಅಥವಾ ಅನರ್ಹ ಅರ್ಜಿದಾರರ ಪಟ್ಟಿಯನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬೇಕು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.