ಬೆಂಗಳೂರಿನಿಂದ ಕಕ್ಕಿಂಜೆಗೆ ಆಗಮಿಸಿದ ಒಂದು ಕುಟುಂಬಕ್ಕೆ ಹೋಮ್‍ಕ್ವಾರಂಟೈನ್

  • ಅಂತರ್ ಜಿಲ್ಲೆಯಿಂದ ಬರುವವರಿಗೆ ಗೃಹದಿಗ್ಭಂಧನ ಅಗತ್ಯ : ಟಿಎಚ್‍ಒ ಕಲಾಮಧು

ಕಕ್ಕಿಂಜೆ: ಬೆಂಗಳೂರಿನಿಂದ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಗೆ ಆಗಮಿಸಿದ ಒಂದು ಕುಟುಂಬವನ್ನು ಆರೋಗ್ಯ ಇಲಾಖೆಯು ಹೋಮ್ ಕ್ವಾರೈಂಟೈನ್‍ಗೆ ಒಳಪಡಿಸಿದೆ.

ಬೆಂಗಳೂರಿನಲ್ಲಿದ್ದ ಈ ಕುಟುಂಬದವರು ಕಕ್ಕಿಂಜೆಗೆ ಬಂದ ಮಾಹಿತಿಯನ್ನು ಸ್ಥಳೀಯರು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಮನೆಗೆ ಬಂದು ಮಾಹಿತಿ ಕೇಳಿದಾಗ ಮನೆಯವರು ಉಡಾಫೆಯಿಂದ ವರ್ತಿಸಿ ಮಾಹಿತಿ ನೀಡದಿದ್ದಾಗ ಮೇಲಧಿಕಾರಿಗಳ ಗಮನಕ್ಕೆ ತರಲಾಯಿತು. ಆ ನಂತರ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಮನೆಯವರಿಗೆ ಮನವರಿಕೆ ಮಾಡಿ ಎಲ್ಲರನ್ನು ಹೋಮ್ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

ಅಂತರ್ ಜಿಲ್ಲೆಯಿಂದ ತಾಲೂಕಿಗೆ ಆಗಮಿಸುವವರಿಗೆ ಹೋಮ್ ಕ್ವಾರಂಟೈನ್: ಟಿಎಚ್‍ಒ ಡಾ.ಕಲಾಮಧು
ಈಗ ಅಂತರ್ ಜಿಲ್ಲೆಗಳಿಂದ ಬರುವವರು ಆಯಾ ಜಿಲ್ಲಾಡಳಿತದಿಂದ ಅನುಮತಿ ಪಡೆದು ಬರುತ್ತಾರೆ. ಅದರ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಿರುತ್ತಾರೆ. ಚೆಕ್‍ಪೋಸ್ಟ್‍ನಲ್ಲಿ ಅವರ ಆರೋಗ್ಯ ಪರೀಕ್ಷಿಸಿ ಅವರನ್ನು 14 ದಿನಗಳ ಹೋಮ್ ಕ್ವಾರಂಟೈನ್‍ಗೆ ಕಡ್ಡಾಯವಾಗಿ ಒಳಾಗಗುವಂತೆ ಆರೋಗ್ಯ ಸಿಬ್ಬಂದಿಗಳು ಸೂಚಿಸುತ್ತಾರೆ. ಅಂತರ್ ಜಿಲ್ಲೆಗಳಿಂದ ಬರುವವರು ಅದನ್ನು ಪಾಲಿಸಬೇಕು. ಆಯಾ ಗ್ರಾಮಗಳಲ್ಲಿ ರಚಿಸಿರುವ ಕಾರ್ಯಪಡೆಗಳ (ಟಾಸ್ಕ್‍ಪೋರ್ಸ್) ತಂಡ, ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಅವರ ಮೇಲೆ ನಿಗಾ ಇಟ್ಟಿರುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.