ಸರಳ ರೀತಿಯಿಂದ ಲಕ್ಷ್ಮೀ ನರಸಿಂಹ ಉತ್ಸವ ಆಚರಣೆ

ನಡ: ನರಸಿಂಹ ಜಯಂತಿ‌ ಪ್ರಯುಕ್ತ ನಡ ಗ್ರಾಮದ ನರಸಿಂಹಗಡದಲ್ಲಿ (ಗಡಾಯಿಕಲ್ಲು) ಎಂಬಲ್ಲಿ ಲಕ್ಷ್ಮೀ ನರಸಿಂಹ ಉತ್ಸವ ವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.

ಬೆಳ್ತಂಗಡಿ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನ ದಿಂದ ತೀರ್ಥವನ್ನು ತೆಗೆದುಕೊಂಡು ಹೋಗಿ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ಪೂಜೆಯ ನಂತರ ನರಸಿಂಹಗಡ ಬುಡದಲ್ಲಿ ನೆಲೆಸಿರುವ ಕರಿಯಮಲ್ಲವ ದೈವಕ್ಕೆ ಪರ್ವ ಸೇವೆಯನ್ನು ಪ್ರತೀ ವರ್ಷದಂತೆ ಈ ವರ್ಷವೂ ನಡೆಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ತಾಲೂಕು ಪದಾಧಿಕಾರಿಗಳು, ಗ್ರಾಮ ಸಮಿತಿ ಪದಾದಿಕಾರಿಗಳು ಹಾಗೂ ನಗರ ಪಂಚಾಯತ್ ಸದಸ್ಯ ಅಂಬರೀಷ್ ಅವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.