ಮಚ್ಚಿನ ಗ್ರಾಮದ ಬೆರ್ಬಲಾಜೆ ಅಕ್ರಮ ಕಸಾಯಿ ಖಾನೆ ದಾಳಿ ಸತ್ಯಕ್ಕೆ ದೂರವಾದ ವಿಷಯ: ಎಸ್.ಪಿ ಗೆ ದೂರು

ಮಚ್ಚಿನ: ಇಲ್ಲಿನ ಬೆರ್ಬಲಾಜೆ ಎಂಬಲ್ಲಿ ಏ. 29 ರಂದು ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿ ಮುಹಮ್ಮದ್ ಹನೀಫ್ ಮತ್ತು ಸಾದಿಕ್ ಎಂಬಿಬ್ಬರನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದು, ಇಲ್ಲಿ ಕಸಾಯಿಖಾನೆ ಇಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಪ್ರಕರಣದಲ್ಲಿ ಕೇಸು ಎದುರಿಸುತ್ತಿರುವ ಮುಹಮ್ಮದ್ ಹನೀಫ್ ಅವರು ಪುಂಜಾಲಕಟ್ಟೆ ಪೊಲೀಸರ ವಿರುದ್ಧ ಎಸ್.ಪಿ ಗೆ ದೂರು ನೀಡಿದ್ದಾರೆ.

ಅಶ್ರಫ್ ಸಾಲ್ಮರ ಎಂಬವರು ಪದಾರ್ಥಕ್ಕಾಗಿ ಮನೆಗೆ ಮಾಂಸ ತಂದುಕೊಟ್ಟಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಪುಂಜಾಲಕಟ್ಟೆ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಬಂದು ನನ್ನ ಮತ್ತು ಸುತ್ತಮುತ್ತಲಿನ ಮೂರು-ನಾಲ್ಕು ಮನೆಗಳಿಗೆ ದಾಳಿ ನಡೆಸಿ ಮನೆಯಲ್ಲಿದ್ದ ಹೆಂಗಸರ ಮೇಲೆ ಹಲ್ಲೆ ಮಾಡಿ ಇದ್ದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ನಾವು ಯಾವುದೇ ಕಸಾಯಿ ಖಾನೆ ಹೊಂದಿಲ್ಲ. ಆದರೂ ಕೊಟ್ಟಿಗೆಯಲ್ಲಿ ಅಕ್ರಮ ಕಸಾಯಿಖಾನೆ ಎಂದು ಸುಳ್ಳು ಪ್ರಕರಣ ದಾಖಲಿಸಿಕೊಂಡು ನನ್ನ ಹಾಗೂ ನಮ್ಮ ಸುತ್ತಮುತ್ತಲಿನ ಮನೆಯವರ ಮಾನಹರಾಜು ಮಾಡಿದ್ದಾರೆ. ಅಲ್ಲದೆ ಕೇಸು ದಾಖಲಿಸಿಕೊಂಡಿದ್ದಾರೆ. ನಾವು ಯಾವುದೇ ಕಾಸಾಯಿಖಾನೆಯನ್ನು ಹೊಂದಿಲ್ಲ.ಇದು ಸುಳ್ಳು ಅಪಾದನೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮಹಮ್ಮದ್ ಹನೀಫ್ ದೂರಿನಲ್ಲಿ ಆಗ್ರಹಿಸಿದ್ದಾರೆ. ಈ‌ ಸಂಬಂಧ ಎಸ್ .ಪಿ ಅವರು ತನಿಖೆ ‌ಕೈಗೆತ್ತಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.