ರಿಯಾದ್‍ನಲ್ಲಿರುವ ಕಾಶಿಬೆಟ್ಟಿನ ಅಬ್ದುಲ್ ರಜಾಕ್‍ರಿಂದ 250 ಕುಟುಂಬಗಳಿಗೆ ಕಿಟ್ ವಿತರಣೆ

ಬೆಳ್ತಂಗಡಿ: ರಿಯಾದ್‍ನಲ್ಲಿರುವ ಕಾಶಿಬೆಟ್ಟು ನಿವಾಸಿ ಅಬ್ದುಲ್ ರಜಾಕ್ ಹಾಜಿಯವರಿಂದ ತಾಲೂಕಿನ ವಿವಿಧ ಗ್ರಾಮಗಳ ಎಲ್ಲ ಸಮಾಜದ ಅರ್ಹ 250 ಬಡ ಕುಟುಂಬಗಳಿಗೆ ರೂ.5 ಲಕ್ಷ ಹಾಗೂ ಅವರ ಕುಟುಂಬದವರು ರೂ.1 ಲಕ್ಷ ಮೌಲ್ಯ ಸೇರಿದಂತೆ ಒಟ್ಟು ರೂ.6 ಲಕ್ಷ ಮೌಲ್ಯದ ಕಿಟ್‍ಗಳನ್ನು ವಿತರಿಸಿದರು. 

ಅಬ್ದುಲ್ ರಜಾಕ್ ಹಾಜಿಯವರು ತಮ್ಮ ಮಾಲಕತ್ವದಲ್ಲಿರುವ ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಅಂಗಡಿ ಕೋಣೆ ಹಾಗೂ ಮನೆಗಳ ಬಾಡಿಗೆದಾರರ ಎರಡು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವುದಾಗಿ ಹೇಳಿದ್ದಾರೆ. ರಜಾಕ್ ನೀಡಿರುವ ಆಹಾರ ಸಾಮಾಗ್ರಿ ಕಿಟ್ ವಿತರಣೆಗೆ ವ್ಯವಸ್ಥೆ ಮಾಡಿದ್ದು ಅವರ ಪರವಾಗಿ ಬೆಳ್ತಂಗಡಿ ಸ್ಮೈಲ್ ಒಂದು ಗ್ರಾಂ ಗೋಲ್ಡ್ ನ ಮಾಲಕ ಜಕೀರ್ ಹುಸೇನ್ ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.