ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಆಹಾರ ಕಿಟ್ ವಿತರಣೆ ಬಗ್ಗೆ ಪೂರ್ವಾಭಾವಿ ಸಭೆ.

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬೆಳ್ತಂಗಡಿ ಇವುಗಳ ವತಿಯಿಂದ ಕೊರೊನಾ ವೈರಸ್ ಮಹಾಮಾರಿಯಿಂದ ಸಮಸ್ಯೆಗೆ ಸಿಲುಕಿದ ಸಮಾಜದ ಬಡವರಿಗೆ, ಅಶಕ್ತರಿಗೆ ,ಆಹಾರ ಕಿಟ್ ವಿತರಿಸುವ ಬಗ್ಗೆ ಪೂರ್ವಾಭಾವಿ ಸಭೆಯು ಮೇ.7 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಘದಲ್ಲಿ ನಡೆಯಿತು.


ತಾಲೂಕಿನ 81 ಗ್ರಾಮಗಳಲ್ಲಿ ಸಮಾಜದ ಅಶಕ್ತರು, ತೀರ ಬಡವರು, ಅನಾರೋಗ್ಯಕೊಳಗಾದವರು, ವಿಧವೆಯರು, ಹಾಗೂ ತೀರಾ ಸಮಸ್ಯೆಗೆ ಒಳಗೊಂಡ ಕುಟುಂಬಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಆಹಾರ ಕಿಟ್ ಅನ್ನು ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ಹೇಳಿದರು.


ಈ ಸಂದರ್ಭದಲ್ಲಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಪಂಜಿಕುಡೇಲು ನಿವಾಸಿ ಚಿನ್ನಮ್ಮರವರು ಅಂತ್ಯೋದಯ ಕಾರ್ಡ್ ಹೊಂದಿದ್ದು ತನಗೆ ಸಿಕ್ಕಿದ ಪಡಿತರ 50 ಕೆಜಿ ಅಕ್ಕಿಯನ್ನು ಹಸಿವಿನಿಂದ ನೊಂದವರಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದು ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮನೋಹರ ಇಳಂತಿಲ, ಕಾರ್ಯದರ್ಶಿ ನಾರಾಯಣ ಸುವರ್ಣ ಬೆಳಾಲು, ಕೋಶಾಧಿಕಾರಿ ಚಿದಾನಂದ ಪೂಜಾರಿ ಎಲ್ದಕ್ಕ, ಜೊತೆಕಾರ್ಯದರ್ಶಿ ಚಂದ್ರಹಾಸ ಕೇದೆ, ಸಂಘದ ಮಾಜಿ ಅಧ್ಯಕ್ಷ ಭಗೀರಥ ಜಿ, ಯುವ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್, ಸಂತೋಷ್ ಕುಮಾರ್ ಕಾಪಿನಡ್ಕ, ಸಂಘದ ನಿರ್ದೇಶಕರುಗಳು, ಗ್ರಾಮ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.