ಕಾಶಿಪಟ್ಣ ಕೃಷಿಕ ರವಿ ಉರ್ಪಾಡಿ ಆತ್ಮಹತ್ಯೆಗೆ ಶರಣು; ಕಾರಣ ನಿಗೂಢ

Advt_NewsUnder_1
Advt_NewsUnder_1
Advt_NewsUnder_1

ಕಾಶಿಪಟ್ಣ: ಇಲ್ಲಿನ ಉರ್ಪಾಡಿ ಮನೆ ನಿವಾಸಿ, ಪ್ರಗತಿಪರ ಕೃಷಿಕ ಹಾಗೂ ಮೇಸ್ತ್ರಿ ಕೆಲಸಗಾರರೂ ಆಗಿದ್ದ ರವಿ (37ವ.) ಅವರು ಮೇ. 6 ರಂದು ರಾತ್ರಿ ಮನೆಯ ಪಕ್ಕದ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷಿಕರು ಹಾಗೂ ಮೇಸ್ತ್ರಿ ಕೆಲಸಗಾರರೂ ಆಗಿದ್ದ ಅವರು ತಾಯಿ ಶೀಲಾ, ಒಂದೂವರೆ ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ಪತ್ನಿ ರೇಷ್ಮಾ, ಸಹೋದರ ರಾಜೇಶ್ ಅವರ ಜೊತೆಯಾಗಿ ತನ್ನ 5 ತಿಂಗಳ ಮಗು ರಚನಾ ಜೊತೆ ವಾಸವಾಗಿದ್ದರು.
ಕೃಷಿಯಲ್ಲಿ ಪ್ರಗತಿ ಸಾಧಿಸಿರುವ ರವಿ ಅವರ ಪತ್ನಿ ಹೆರಿಗೆಯಾಗಿ ಇತ್ತೀಚೆಗೆ ಮನೆಗೆ ಬಂದಿದ್ದವರು ತವರು ಮನೆಗೆ ಹೋಗಿದ್ದರು. ರವಿ ಅವರು ಮೊನ್ನೆ ರಾತ್ರಿ ಅಲ್ಲಿಗೆ ಹೋದವರು ನಿನ್ನೆ ಬೆಳಿಗ್ಗೆ ಕಾಶಿಪಟ್ಣಕ್ಕೆ ಮರಳಿದ್ದರು. ಅಂದೇ ರಾತ್ರಿ 9 ಗಂಟೆಗೆ ಮನೆಯಲ್ಲಿ ಊಟಕ್ಕೆ ತಯಾರಾದರೂ ರವಿ ಅವರನ್ನು ಕಾಣದೇ ಇದ್ದಾಗ ಮನೆಯವರು ಹೊರಬಂದು ಹುಡುಕಾಡಿದಾಗ ಅವರು ನೇಣುಬಿಗಿದುಕೊಂಡ ಬಗ್ಗೆ ತಿಳಿಯಿತು. ಮನೆಯಲ್ಲಿ ಉತ್ತಮ ಕೃಷಿ ಮಾಡಿರುವ ರವಿ ಅವರಿಗೆ ಮೇಲ್ನೋಟಕ್ಕೆ ಹೇಳಿಕೊಳ್ಳಬಹುದಾದ ಆರ್ಥಿಕ ಸಮಸ್ಯೆ ಏನೂ ಇರಲಿಲ್ಲ. ಆದ್ದರಿಂದ ಅವರ ಈ ಆತ್ಮಹತ್ಯೆ ಊರಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮೃತರು ತಾಯಿ, ಪತ್ನಿ, ಮಗು, ಮೂರು ಮಂದಿ ಸಹೋದರರು, ಮೂರು ಮಂದಿ ಸಹೋದರಿಯರು ಹಾಗೂ ಬಂಧುವರ್ಗವರನ್ನು ಅಗಲಿದ್ದಾರೆ.
ಮೃತರ ಮನೆಗೆ ಕಾಶಿಪಟ್ಣ ಗ್ರಾ.ಪಂ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಸದಸ್ಯ ಪ್ರವೀಣ್ ಪಿಂಟೋ ಹಾಗೂ ಸ್ಥಳೀಯ ನೂರಾರು ಜನರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಘಟನೆ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.