ಮಡಂತ್ಯಾರು;ಆಯ್ದ ಕೃಷಿಕಾರ್ಮಿಕರಿಗೆ ಹಾಗೂ ಬಡ‌ ಕೂಲಿ‌ಕಾರ್ಮಿಕ 75 ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿದ ದಾನಿಗಳು

ಮಡಂತ್ಯಾರು; ಇಲ್ಲಿನ ಗ್ರಾ. ಪಂ. ಮಾಜಿ ಅದ್ಯಕ್ಷ, ಹಾಲಿ ಸದಸ್ಯ, ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು ನೇತ್ರತ್ವದಲ್ಲಿ ಅವರ ಮಿತ್ರರುಗಳಾದ ನಿತ್ಯಾನಂದ.ಬಿ ಕೊಲ್ಪೆದ ಬೈಲ್, ಜಯಪ್ರಕಾಶ್ ಶೆಟ್ಟಿ, ಮಾಲ್ಹಕರು ಟೊನಿ ಬಾರ್ ಏಂಡ್ ರೆಸ್ಟೋರೆಂಟ್ ಮಡಂತ್ಯಾರ್,

ಗಿರೀಶ್ ಪೈ ಅನಂತೇಶ್ವರ ಸೂಪರ್‌ ಬಜಾರ್ ಕೊಲ್ಪದಬೈಲ್, ಮೆಲ್ಚಿನ್ ಲೊಬೊ ಕಾನ್ವೆಂಟ್ ರೋಡ್ ಮಡಂತ್ಯಾರ್, ಅಕೀಲ್ ಇಂಜಿನಿಯರ್ ಮಂಗಳೂರು ಮತ್ತು ಅಬ್ದುಲ್ ರಝಾಕ್ ಯು ಎ ಇ ಇವರೆಲ್ಲರ ಸಹಭಾಗಿತ್ವದಲ್ಲಿ ಕೊವಿಡ್ ~19 ಸಂಬಂಧಿಸಿದಂತೆ, ಮಡಂತ್ಯಾರು ಗ್ರಾಮದ ಆಯ್ದ ಕೃಷಿ ಕಾರ್ಮಿಕ ಹಾಗು ದಿನಗೂಲಿ ಕಾರ್ಮಿಕ ಒಟ್ಟು 75 ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿದರು.

ಕಿಟ್ ನಲ್ಲಿ 10 kg ಅಕ್ಕಿ, 2kgಸಕ್ಕರೆ, ಚಹಾ ಹುಡಿ,ಅಡುಗೆ ಎಣ್ಣೆ, ಮೆಣಸು,ನೀರುಳ್ಳಿ, ತೊಗರಿ ಬೇಳೆ,ಗೋದಿ ಹುಡಿ ಸೇರಿದಂತೆ ದಿನಸಿಗಳನ್ನು ಹಂಚಲಾಯಿತು.

ಚೆನ್ನೈನ ಖ್ಯಾತ ಉದ್ಯಮಿ, ಕೊಲ್ಪೆದಬೈಲಿನ‌ ಸುಪದ್ಮ ನಿವಾಸಿ ನಿತ್ಯಾನಂದ ಬಿ ಅವರು ಈ‌‌ನೆರವು ಕಾರ್ಯಕ್ಕೆ ಚಾಲನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.