12 ಕುಟುಂಬಗಳ ಒಂದು ತಿಂಗಳ ಬಾಡಿಗೆ ಮನ್ನಾ ಮಾಡಿ ಮಾದರಿಯಾದ ಮನೆ ಮಾಲೀಕ

ಬೆಳ್ತಂಗಡಿ: ಕೊರೋನಾದಿಂದ ದೇಶಾದ್ಯಂತ ಪ್ರಸಕ್ತ ಜಾರಿಯಲ್ಲಿರುವ ಲಾಕ್ ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಕೆಲವು ವ್ಯಕ್ತಿಗಳು ಮತ್ತು ಸಾಮಾಜಿಕ ಸಂಘಟನೆಗಳು ನೆರವನ್ನು ನೀಡುತ್ತಿರುವ ವಿಷಯಗಳು ನಮಗೆಲ್ಲಾ ಗೊತ್ತೇ ಇದೆ.

ಈ ಗುಂಪಿಗೆ ಬೆಳ್ತಂಗಡಿ ತಾಲೂಕಿನ ಕಟ್ಟಡದ ಮಾಲಕರೊಬ್ಬರು ಸೇರುತ್ತಾರೆ. ತನ್ನ ಎರಡು ಕಟ್ಟಡಗಳ ಮನೆಗಳಲ್ಲಿರುವ ಎಲ್ಲಾ ಬಾಡಿಗೆದಾರರ ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಸಮಯೋಚಿತ ನಿರ್ಧಾರದ ಮೂಲಕ ಅವರು ಊರಿಗೆ ಮಾದರಿಯಾಗಿದ್ದಾರೆ.

ಉಜಿರೆಯ ಕುಂಟಿನಿ ನಿವಾಸಿ ಕೆ.ಸೂಫಿ ಹಾಜಿ ಅತ್ತಾಜೆ ಯವರ ಪುತ್ರ ಯು.ಎ.ಕುಂಙಿ ಮುಹಮ್ಮದ್ ಸಅದಿ ಯವರೇ ಈ ಕಟ್ಟಡಗಳ ಮಾಲಕರು.

ಸೌದಿ ಅರೆಬಿಯಾದಲ್ಲಿ ಉದ್ಯೋಗಿಯಾಗಿರುವ ಅವರು ತಮ್ಮ ಉಜಿರೆಗೆ ಸಮೀಪದ ಕುಂಟಿನಿಯಲ್ಲಿರುವ ಕಟ್ಟಡದ 12 ಕುಟುಂಬಗಳ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿರುವುದಾಗಿ ಘೋಷಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.