ಕಣಿಯೂರು, ಬಂದಾರು ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಭೇಟಿ

ಬೆಳ್ತಂಗಡಿ: ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕ ಗಾಳಿ ಮಳೆಯಿಂದಾಗಿ ತಾಲೂಕಿನ ಕಣಿಯೂರು ಜಿಲ್ಲಾ ಪಂಚಾಯತ್ ವ್ಯಾ ಪ್ತಿಯ ಕೆಲವು ಗ್ರಾಮಗಳಲ್ಲಿ ವ್ಯಾಪಕ ಹಾನಿಯುಂಟಾಗಿದ್ದು, ಈ ಪ್ರದೇಶಗಳಿಗೆ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಮೇ 4ರಂದು ಭೇಟಿ ನೀಡಿದರು.

ಕಣಿಯೂರು ಗ್ರಾಮದ ಪದ್ಮುಂಜ , ಶುಂಠಿಪಲ್ಕೆ , ಬಂದಾರು ಗ್ರಾಮದ ಮೈರೋಳ್ತಡ್ಕ , ಬಟ್ಲಾಡ್ಕ ಉರುವಾಲು ಗ್ರಾಮದ ಉರುವಾಲುಪದವು ಮೊದಲಾದ ಪ್ರದೇಶಗಳಲ್ಲಿ ಗಾಳಿಮಳೆಗೆ ಅಡಿಕೆ, ತೆಂಗು, ಬಾಳೆ ಸೇರಿದಂತೆ ವ್ಯಾಪಕ ಕೃಷಿ ಹಾನಿಯಾಗಿದೆ. ಬಾರಿ ಗಾತ್ರದ ಮರಗಳು ಧರೆಗುರುಳಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು ವಿದ್ಯುತ್ ಪೂರೈಕೆ ಕಡಿತಗೊಂಡಿತ್ತು. ಬಂದಾರು ಹಿ.ಪ್ರಾ.ಶಾಲೆಯ ಮೇಲ್ಚಾವಣಿಯ ಸಾವಿರಾರು ಹಂಚುಗಳು ಹಾರಿ ಹೋಗಿ ವ್ಯಾಪಕ ನಷ್ಟ ಉಂಟಾಗಿತ್ತು. ಈ ಪ್ರದೇಶಗಳಿಗೆ ಹರೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹಾನಿಗೊಳಗಾದ ಮನೆಯ ಯಜಮಾನರಿಗೆ ಸಾಂತ್ವನ ಹೇಳುವ ಮೂಲಕ ವೈಯಕ್ತಿಕ ಆರ್ಥಿಕ ಸಹಾಯಧನದ ಜೊತೆಗೆ ಆಹಾರ ಕಿಟ್ ಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸ್ಥಳದಿಂದಲೇ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಹರೀಶ್ ಕುಮಾರ್ , ಹಾನಿಗೊಳಗಾದ ಮನೆಗಳಿಗೆ ಶೀಘ್ರವಾಗಿ ಪ್ರಕೃತಿ ವಿಕೋಪ ಯೋಜನೆಯಡಿ ಸಹಾಯಧನ ಕೊಡಿಸುವಂತೆ ಆದೇಶಿಸಿದರು. ಜಿ.ಪಂ.ಇಂಜಿನಿಯರಿಂಗ್ ಉಪ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಚೆನ್ನಪ್ಪ ಮೊಯಿಲಿ ಅವರ ಜೊತೆಗೆ ಮಾತನಾಡಿ ತಕ್ಷಣ ನಷ್ಟದ ಎಸ್ಟಿಮೆಂಟ್ ತಯಾರಿಸಲು ಸೂಚಿಸಿದರು. ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್, ಕ್ಷೇತ್ರ ಶಿಕ್ಷಣಾಧಿಕಾರಿ ಗೂ ದೂರವಾಣಿ ಮೂಲಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು. ಕೊರೋನಾ ಲಾಕ್ ಡೌನ್ ನಿಂದಾಗಿ ಮೊದಲೇ ಸಂಕಷ್ಟದಿಂದಿದ್ದ ಕುಟುಂಬಗಳಿಗೆ ಗಾಳಿಮಳೆಯ ವ್ಯಾಪಕ ಹಾನಿ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿಸಿದೆ. ಈ ಹಾನಿಯ ಬಗ್ಗೆ ಸಂಬಂಧಿಸಿದ ಇಲಾಖೆಗಳ ವರದಿ ಆಧಾರಿಸಿ ಹೆಚ್ಚಿನ ಪರಿಹಾರ ನಿಧಿಗಾಗಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಕೆ ಶಾಹುಲ್ ಹಮೀದ್ , ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷ ಕೆ. ಶೈಲೇಶ್ ಕುಮಾರ್ , ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ , ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ , ದಸಂಸ (ಅಂಬೇಡ್ಕರ್ ವಾದ)ದ ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ್ , ದಸಂಸ (ಅಂಬೇಡ್ಕರ್ ವಾದ) ದ ತಾಲೂಕು ಖಜಾಂಚಿ ಬಿ.ಕೆ ಶೇಖರ್ ಕಣಿಯೂರು , ಮುಖಂಡ ಗಣೇಶ್ ಕಣಿಯೂರು , ಕಣಿಯೂರು ಗ್ರಾಮ ಪಂಚಾಯತ್ ಸದಸ್ಯ ಯಶೋಧರ ಶೆಟ್ಟಿ , ಸೀತಾರಾಮ್ ಮಡಿವಾಳ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.