ಕಣಿಯೂರು : ಇಲ್ಲಿನ ಕಣಿಯೂರು,ಬಂದಾರು ಗ್ರಾಮ ಪಂಚಾಯತು ವ್ಯಾಪ್ತಿಯ ಪದ್ಮಂಜ, ಉರುವಾಲುಪದವು,ಕುಪ್ಪೆಟ್ಟಿ,ಮೈರೋಳ್ತಡ್ಕ,ಮುಗೇರಡ್ಕ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆ ಗಾಳಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಹತ್ತಕ್ಕೂ ಹೆಚ್ಚಿನ ಸಂಖ್ಯೆಯ ಮನೆಗಳ ಹೆಂಚು,ಸಿಮೆಂಟ್ ಶೀಟ್ ಗಳು ಗಾಳಿ ಮತ್ತು ಮಳೆಯ ರಭಸಕ್ಕೆ ಮನೆಯಂಗಳದಿಂದ ದೂರ ಹಾರಿ ಹೋಗಿದೆ.ಬೃಹತ್ ಗಾತ್ರದ ಮುರಿದು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಿದೆ.
ಕಣಿಯೂರು ಗ್ರಾಮದ ಗೀತಾ ಮುತ್ತಣ್ಣ ಶೆಟ್ಟಿಯವರ ಮನೆಗೆ ಮರ ಬಿದ್ದಿರುವುದು, ಪುದೋಟ್ಟು ದಲಿತ ಕಾಲೋನಿ ಪ್ರತ್ಯೇಕ 2 ಮನೆಗಳ ಸಿಮೆಂಟ್ ಶೀಟ್ ಮತ್ತು ಹೆಂಚುಗಳು,ನೀಲಯ್ಯ ನಲ್ಕೆ,ವೆಂಕಪ್ಪ ನಲ್ಕೆ, ಚಂದ್ರ ನಲ್ಕೆಯವರ ಮನೆಗಳಿಗೆ ಹಾನಿಯಾಗಿದೆ.ಪ್ರೇಮ ರವರ ಪುತ್ರ ಡಿಪ್ಲೋಮ್ ವಿದ್ಯಾರ್ಥಿ ಅಭಿಷೇಕ್ ತಲೆಗೆ ಸಿಮೆಂಟ್ ಶೀಟ್ ತಂಡು ಬಿದ್ದಿರುವ ಕಾರಣ ತಲೆಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.
ಉಂರ್ಬೀತ್ತಿಮಾರು ಕೃಷಿಕ ಮಾಧವ ಗೌಡರ ಮನೆಯ ಪಕ್ಕದಲ್ಲಿರುವ ಅಡಿಕೆ, ತೆಂಗು ತೋಟಕ್ಕೆ ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದಿರುವ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿರುತ್ತದೆ.ಪದ್ಮುಂಜ ಸು ಬ್ಬಯ್ಯ ಶೆಟ್ಟಿ ಮನೆಯ ಪಕ್ಕದ ಮರ ಮುರಿದು ಬಿದ್ದಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಹಾನಿಯಾಗಿದೆ. ಜನತಾ ಕಾಲೋನಿಯ ಕೆಲವೊಂದು ಮನೆಗಳಿಗೆ ಮತ್ತು ಪದ್ಮುಂಜ ಮೆಟ್ರಿಕ್ ಪದವಿ ಪೂರ್ವ ಕಾಲೇಜು ವಸತಿ ಗೃಹದ ಕಟ್ಟಡಕ್ಕೂ ಹಾನಿ ಉಂಟಾಗಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ವೀಕ್ಷಿಸಿದರು. ಸರಕಾರದ ಮೂಲಕ ಪರಿಹಾರವನ್ನು ಒದಗಿಸಿ ಕೊಡುವುದಾಗಿ ಭರವಸೆಯನ್ನು ನೀಡಿದರು. ಹಾಗೂ ವೈಯಕ್ತಿಕವಾಗಿ ಧನಸಹಾಯ ನೀಡಿ ಸಂತೈಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತು ಸದಸ್ಯರಾದ ಅಮಿತಾ ಕುಶಾಲಪ್ಪ ಗೌಡ,ಕೃಷ್ಣಯ್ಯ ಆಚಾರ್ಯ, ಕಣಿಯೂರು ಪಂಚಾಯತು ಅಧ್ಯಕ್ಷ ಸುನೀಲ್ ಸಾಲಿಯನ್ ಬೆಂಗಾಯಿ,ಪಂಚಾಯತು ಸದಸ್ಯರಾದ ನರಸಿಂಹ ಶೆಟ್ಟಿ ಪಣೆಕರ,ಕೃಷ್ಣ ನಿರಾಡಿ,ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ, ಬಾರ್ಯ ಸಿ.ಎ ಬ್ಯಾಂಕ್ ಅಧ್ಯಕ್ಷ ಸುಬ್ರಮಣ್ಯ ಗೌಡ ಕೈಕುರೆ,ಪಕ್ಷದ ಪ್ರಮುಖರಾದ ಪುರಂದರ ಶೆಟ್ಟಿ ಪಣೆಕರ,ಮಹಾಬಲ ಗೌಡ, ಪ್ರಶಾಂತ್ ಗೌಡ, ಅವಿನಾಶ್,ಪ್ರದೀಪ್,ರಂಜಿತ್ ಪಣೆಕರ, ಅಮ್ಮು ಪುದ್ದೋಟ್ಟು ಕಣಿಯೂರು ಗ್ರಾಮ ಲೆಕ್ಕಿಗ ಸತೀಶ್ ಹಾಗೂ ಸಹಾಯಕ ಬಾಲಕೃೃಷ್ಣ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.