ಯುವವಾಹಿನಿ ಘಟಕದಿಂದ ತಾಲೂಕು ಆಸ್ಪತ್ರೆ ಹಾಗೂ ಪಟ್ಟಣ ಪಂಚಾಯತ್ ಗೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರ

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಹಾಗೂ ಕೈಗಳನ್ನು ಆಗಾಗ ಸ್ವಚ್ಛವಾಗಿಡುವ ದೃಷ್ಟಿಯಿಂದ ವೈರಸ್ ನಾಶಕವಾಗಿ ಸ್ಯಾನಿಟೈಸರ್ ಬಳಕೆ ಅನಿವಾರ್ಯವಾಗಿದೆ ಅದಕ್ಕಾಗಿ ಬೆಳ್ತಂಗಡಿಯ ಯುವವಾಹಿನಿ ಘಟಕದ ವತಿಯಿಂದ ಬೆಳ್ತಂಗಡಿಯ ತಾಲೂಕು ಆಸ್ಪತ್ರೆ, ಪಟ್ಟಣ ಪಂಚಾಯತ್ ಹಾಗೂ ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಲಾಮಧು, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಬೆಳ್ತಂಗಡಿ ಘಟಕದ ಯುವವಾಹಿನಿ ಅಧ್ಯಕ್ಷ ಎಂ.ಕೆ. ಪ್ರಸಾದ್, ಘಟಕದ ಉಪಾಧ್ಯಕ್ಷ ದೇವಿಪ್ರಸಾದ್ ಬರಮೇಲು, ಸುಜಾತ ಅಣ್ಣಿ ಪೂಜಾರಿ, ಘಟಕದ ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಕಾರ್ಯದರ್ಶಿ ಗುರುರಾಜ್ ಸಾಲ್ಯಾನ್, ನಿರ್ದೇಶಕರಾದ ಮನೋಜ್ ಕುಂಜರ್ಪ, ಸದಾಶಿವ ಊರ, ಉದಯ್ ಬಂಗೇರ ನಾವೂರು, ಘಟಕದ ಸಲಹೆಗಾರರಾದ ಬಿಎಸ್‍ಎನ್‍ಎಲ್ ನಿವೃತ್ತ ಇಂಜಿನಿಯರ್ ಅಣ್ಣಿ ಪೂಜಾರಿ ಉಜಿರೆ, ಪ್ರಶಾಂತ್ ಜಶನ್ ಗ್ರೂಪ್, ಬೆಳ್ತಂಗಡಿ ರಘುನಾಥ್ ಶಾಂತಿ, ಉಮೇಶ್ ಸುವರ್ಣ ಶಿರ್ಲಾಲು, ಚಂದ್ರಶೇಖರ್ ಮಹಾಗಣಪತಿ ಅಳದಂಗಡಿ, ಯುವವಾಹಿನಿ ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಯಶೋಧರ ಚಾರ್ಮಾಡಿ, ಸಂಘಟನ ಕಾರ್ಯದರ್ಶಿಗಳಾದ ಸುರೇಂದ್ರ ಕೋಟ್ಯಾನ್, ಕರುಣಾಕರ್ ಬೆಳ್ತಂಗಡಿ, ವನಿತಾ ಜನಾರ್ದನ್, ಸುರೇಶ್ ಮೇಲಂತಬೆಟ್ಟು, ಪ್ರವೀಣ್ ಕೊಡ್ಯೇಲು, ವಿಶ್ವನಾಥ್ ಬಂಗೇರ ಶಿರ್ಲಾಲು, ದೇವದಾಸ್ ಸಾಲಿಯನ್ ಅಲಡ್ಕ, ಶಿರ್ಲಾಲು ಸಂಚಾಲನ ಸಮಿತಿ ಅಧ್ಯಕ್ಷ ಜ್ಞಾನೇಶ್ ಶಿರ್ಲಾಲು ಸದಸ್ಯ ಸಂದೀಪ್ ಎಸ್ ಎನ್ ಅರ್ವ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.