ಉಜಿರೆ: ಸ್ನೇಹ ಸಂಗಮ ಹೆಲ್ಪ್ಲೈನ್ ವಾಟ್ಸಪ್ ಗ್ರೂಪ್ ವತಿಯಿಂದ ಬೆಳ್ತಂಗಡಿ ತಾಲೂಕಿನಾದ್ಯಂತ ಸುಮಾರು 24 ಅರ್ಹ ಹಿಂದು ಮುಸ್ಲಿಂ ಕುಟುಂಬಗಳಿಗೆ ದಾನಿಗಳ ಸಹಾಯದಿಂದ ಆಹಾರ ಸಾಮಾಗ್ರಿ ವಿತರಿಸಲಾಯಿತು. ಸ್ನೇಹ ಸಂಗಮ ಹೆಲ್ಪ್ಲೈನ್ ವಾಟ್ಸಪ್ ಗ್ರೂಪ್ 2014ರಿಂದ ಬೆಳ್ತಂಗಡಿ ತಾಲೂಕಿನಾದ್ಯಂತ ಕಾರ್ಯಾಚರಿಸುತ್ತಿದ್ದು ಹಲವಾರು ಬಡ ವರ್ಗದ ಜನರಕಣ್ಣೀರೊರೆಸುವ ಕೆಲಸ ಮಾಡುತ್ತಾ ಬಂದಿದೆ.
ಬಡವರಿಗೆ ಮನೆ ನಿರ್ಮಿಸಿಕೊಡುವುದಲ್ಲದೆ ಆಹಾರ, ಔಷಧಿ, ಶಿಕ್ಷಣ ಇನ್ನಿತರ ಕುಂದುಕೊರತೆಗಳಿಗೆ ಸದಾ ಸ್ಪಂಧಿಸುತ್ತಿದ್ದು ಇದೀಗ ಕೊರೊನಾ ಮಹಾಮಾರಿಯ ಲಾಖ್ಡೌನ್ನಿಂದ ಪರದಾಡುತ್ತಿರುವ ಬಡ ಜನತೆಗೆ ಆಶಾದಾಯಕವಾಗಿ ಅಡ್ಮಿನ್ಗಳಾದ ಅಬ್ದುಲ್ ರಹಿಮಾನ್, ಶರೀಫ್, ಲತೀಫ್ ಕಲ್ಲೆ, ಇಲ್ಯಾಸ್ ಸ್ಮಾರ್ಟ್ ಮೊಬೈಲ್ ಉಜಿರೆ, ಇಂತಿಯಾಝ್ ಕತಾರ್ ಇವರ ಮಾರ್ಗದರ್ಶನದಂತೆ ದಾನಿಗಳಿಂದ ಸುಮಾರು ರೂ. 81,400 ಸಂಗ್ರಹಿಸಿ ಬೆಳ್ತಂಗಡಿ ತಾಲೂಕಿನಾದ್ಯಂತ ಅರ್ಹ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಿಸಲಾಯಿತು. ಈ ಸಂದರ್ಭ ಸದಸ್ಯರಾದ ಶರೀಫ್ ಉಜಿರೆ, ಹಕೀಂ, ಸಲೀಂ, ಫಾರೂಕ್ ನೆರಿಯ, ರಝಾಕ್ ಕೊಯ್ಯೂರು, ಅಶ್ರಫ್ ನಿಡಿಗಲ್ ಉಪಸ್ಥಿತರಿದ್ದರು.