ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ವತಿಯಿಂದ ಆಹಾರ ಕಿಟ್ ವಿತರಣೆ

ಉಜಿರೆ : ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಕೆಲಸವಿಲ್ಲದರಿಂದ ದಿನಗೂಲಿ ನೌಕರರು,ಬಡವರು ದಿನಬಳಕೆಯ ಅಗತ್ಯ ಸಾಮಾಗ್ರಿಗಳನ್ನು ದೈನಂದಿನ ಸಂಪಾದನೆ ಇಲ್ಲದಿರುವುದರಿಂದ ಖರೀದಿಸಲು ಆಗುತ್ತಿಲ್ಲ.ಇದರಿಂದ ಸಂಕಷ್ಟಕ್ಕೆ ಒಳಗಾದ ದಿನಗೂಲಿ ನೌಕರರಾದ ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ಸಮಿತಿಯ ಆಯ್ದ ಸದಸ್ಯರಿಗೆ ಕೆ.ಸಿ.ಎಫ್ ಹಾಗೂ ಸಂಘ ಕುಟುಂಬದ ನಾಯಕರ ಹಾಗೂ ದಾನಿಗಳ ಸಹಕಾರದಿಂದ ಮೇ.2 ರಂದು 19 ಸದಸ್ಯರಿಗೆ ಅಕ್ಕಿ ಹಾಗೂ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್.ಎಂ.ಕೋಯ ತಂಙಳ್,ಕೆ.ಸಿ.ಎಫ್ ನಾಯಕರಾದ ಸಲೀಂ ಕನ್ಯಾಡಿ, ಎಸ್‌ವೈ‌ಎಸ್ ಉಜಿರೆ ಸೆಂಟರ್ ಉಪಾಧ್ಯಕ್ಷ ಮುಹಿಯುದ್ದೀನ್ ಉಜಿರೆ, ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಮಾಜಿ ಅಧ್ಯಕ್ಷ ಎಸ್‌ವೈ‌ಎಸ್ ಉಜಿರೆ ಸೆಂಟರ್ ಕಾರ್ಯದರ್ಶಿ ಆದ ಕಾಸಿಂ ಮುಸ್ಲಿಯಾರ್ ಮಾಚಾರು, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸದಸ್ಯರಾದ ಇಕ್ಬಾಲ್ ಮಾಚಾರು, ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ಅಧ್ಯಕ್ಷರಾದ ಹಮೀದ್ ಸ‌ಅದಿ ಕುಕ್ಕಾವು, ಪ್ರ.ಕಾರ್ಯದರ್ಶಿ ಮುಬೀನ್ ಉಜಿರೆ ಮುಂತಾದವರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.