HomePage_Banner_
HomePage_Banner_
HomePage_Banner_

ಜಿಲ್ಲೆಯಿಂದ ಬೇರೆ ರಾಜ್ಯಗಳಲ್ಲಿ ಪ್ರಯಾಣಿಸುವವರಿಗೆ ದ.ಕ ಜಿಲ್ಲಾಡಳಿತದಿಂದ ಮಾರ್ಗಸೂಚಿ

Advt_NewsUnder_1

ದಕ್ಷಿಣ ಕನ್ನಡ ಜಿಲ್ಲೆಯಿಂದ ಇತರ ಬೇರೆ ರಾಜ್ಯಗಳಿಗೆ ಪ್ರಯಾಣಿಸುವವರು ತಮ್ಮ ಹೆಸರು ಮತ್ತು ವಿಳಾಸವನ್ನು ಆನ್ಲೈನ್ ಮೂಲಕ ನೊಂದಾಯಿಸಬಹುದು. ಅನ್ಲೈನ್ ಅರ್ಜಿ ಸಲ್ಲಿಸುವವರು ಎಲ್ಲಾ ಗ್ರಾಮ ಪಂಚಾಯತ್ ಕಛೇರಿ, ಪಟ್ಟಣ ಪಂಚಾಯತ್, ನಗರಸಭೆ, ಪುರಸಭೆ ಕಛೇರಿ, ಎಲ್ಲಾ ತಾಲೂಕು ಕಛೇರಿ, ನಗರಪಾಲಿಕೆಯ ಎಲ್ಲಾ ವಲಯ ಕಛೇರಿ, ಮಂಗಳೂರು ನಗರ ವ್ಯಾಪ್ತಿಯ ಎಲ್ಲಾ ನಾಡಕಛೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.
ಸ್ವೀಕೃತವಾದ ಅರ್ಜಿಗಳನ್ನು ರಾಜ್ಯ ಮಟ್ಟದಲ್ಲಿ ಪರಿಶೀಲನೆ ನಡೆಸಿ, ಸ್ವೀಕರಿಸುವ ರಾಜ್ಯದ ಸಹಮತಿ ಇದ್ದಲ್ಲಿ ಮಾತ್ರ ಅನುಮೋದಿಸಲ್ಪಡುತ್ತದೆ, ಅನುಮೋದಿತ ಅರ್ಜೀದಾರರಿಗೆ ಕೆ.ಎಸ್. ಆರ್.ಟಿ.ಸಿ/ ರೈಲ್ವೆ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗುವುದು. ಪ್ರಯಾಣಿಕರು ಟಿಕೆಟ್ ಖರೀದಿಸತಕ್ಕದ್ದು. ಪ್ರಯಾಣ ಪೂರ್ವದಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಅನುಮೋದಿತ ಪ್ರಯಾಣಿಕರು ಪ್ರಯಾಣಿಸುವಾಗ ಡ್ರೈವಿಂಗ್ ಲೈಸೆನ್ಸ್/ ಪಾಸ್ ಪೋರ್ಟ್/ ಓಟರ್ ಐಡಿ/ ಆಧಾರ್ ಕಾರ್ಡ್/ ಪಾನ್ ಕಾರ್ಡ್ ಹೊಂದಿರತಕ್ಕದ್ದು. ಎಂದು ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆಯಲ್ಲಿ ಸೂಚಿಸಿದೆ.

CamScanner 05-02-2020 15.29.40

 

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.