ಲಾಯಿಲ ಗ್ರಾ.ಪಂ.ವ್ಯಾಪ್ತಿಯ 65 ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ವಿತರಣೆ

ಲಾಯಿಲ : ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆಯಿಂದ ಅಗತ್ಯ ದಿನಸಿ ಸಾಮಾಗ್ರಿಗಳ ಖರೀದಿಸಲು ಸಂಕಷ್ಟವಾದ ಲಾಯಿಲ ಗ್ರಾ.ಪಂ.ವ್ಯಾಪ್ತಿಯ ಸುಮಾರು 65

ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.

ಕಾರ್ಮಿಕರ ದಿನಾಚರಣೆಯಂದು ಬಡ ಕೂಲಿ ಕಾರ್ಮಿಕರ ಹಸಿವು ನೀಗಿಸಲು ಪುತ್ರಬೈಲು, ಗಾಂಧಿ ನಗರ, ಕಕ್ಕೇನ, ರಾಮಗಾರಿ, ಮಾಂಜಾಲು, ಪರಿಸರದ ಬಡ ಕುಟುಂಬಗಳಿಗೆ ದಾನಿಗಳ ಸಹಕಾರದಿಂದ ಆಹಾರ ಕಿಟ್ ಗಳನ್ನು ನೀಡಲಾಯಿತು. ಈಗಾಗಲೇ ಶಾಸಕರಾದ ಹರೀಶ್ ಪೂಂಜಾ ಅವರು ನೀಡಿದ ಆಹಾರ ಕಿಟ್ ಗಳನ್ನು ಲಾಯಿಲ 4ನೇ ವಾರ್ಡ್ ನಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಿರೀಶ್ ಡೋಂಗ್ರೆಯವರ ನೇತೃತ್ವದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ, ತಾ. ಪಂ ಸದಸ್ಯರಾದ ಸುಧಾಕರ್ ಬಿ ಎಲ್, ಎಪಿಎಂಸಿ ಸದಸ್ಯರೂ ಹಾಗೂ ಪ್ರಮುಖರಾದ ಈಶ್ವರ ಭೈರ, ಪಂಚಾಯತ್ ಸದಸ್ಯರೂ, ಮಾಜಿ ಅಧ್ಯಕ್ಷರಾದ ಪ್ರಾನ್ಸಿಸ್ ಡಿಸೋಜಾ, ಪಂ ಸದಸ್ಯರಾದ, ಜಯಲಕ್ಷ್ಮಿ, ದಿನೇಶ್ ಶೆಟ್ಟಿ, ಮೋಹನದಾಸ್, ಪುಷ್ಪಾ, ಗ್ರಾಮ ಸಮಿತಿ ಮಾಜಿ ಅಧ್ಯಕ್ಷರೂ ಹಾಗೂ ಪ್ರಮುಖರಾದ ಮಧುಸೂಧನ್, ಸುರೇಶ್ ಭೈರ, ಉದಯ ಕುಮಾರ್ ಉಪಸ್ಥಿತರಿದ್ದರು. ಪ್ರೇಮರಾಜ್ ಸಿಕ್ವೇರಾ, ಹರೀಶ್ ನಾಯ್ಕ ವಿತರಣೆಯಲ್ಲಿ ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.