ಕೊಕ್ರಾಡಿ: ದಾನಿಗಳ‌ ಸಹಕಾರದಿಂದ 250 ಕುಟುಂಬಗಳಿಗೆ ದಿನಸಿ ಸಾಮಾಗ್ರಿ,ಔಷಧಿ ವ್ಯವಸ್ಥೆ

Advt_NewsUnder_1
Advt_NewsUnder_1
Advt_NewsUnder_1

ಕೊಕ್ರಾಡಿ :ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರಕಾರದ ಆದೇಶದ ಪ್ರಕಾರ ಲಾಕ್ ಡೌನ್ ಕಾನೂನು ಇರುವುದರಿಂದ ಜನಸಾಮಾನ್ಯರಿಗೆ ಕೂಲಿ ಕೆಲಸವಿಲ್ಲದೆ ತಮ್ಮ ಹಸಿವು ನೀಗಿಸುವಲ್ಲಿ ತೊಡಕುಂಟಾದ ಕಾರಣ ಅಂತಹ ಕುಟುಂಬಗಳಿಗೆ ನೆರವಾಗಲು, ಬೆಳ್ತಂಗಡಿ ತಾಲೂಕು ,ಕೊಕ್ರಾಡಿ ಗ್ರಾಮದ ಸೂರ್ಯನಾರಾಯಣ ಡಿ.ಕೆ,ಸಂತೋಷ್ ಹೆಗ್ಡೆ,ದೀಪಕ್ ಶೆಟ್ಟಿ,ಹರೀಶ್ ಕುಮಾರ್ ಹಾಗೂ ಶಿವಪ್ರಕಾಶ್ ರವರು ತಂಡ ರಚಿಸಿ,ಕೊಕ್ರಾಡಿ ಗ್ರಾಮದ ಹಾಗೂ ಪರ ಊರಿನ ಸಹೃದಯಿ ದಾನಿಗಳಿಂದ ಸುಮಾರು ರೂಪಾಯಿ 1,00,000/- ಸಂಗ್ರಹಿಸಿ, ಇದರಲ್ಲಿ ತಲಾ ರೂಪಾಯಿ 400/- ರ 250 ಕೂಪನ್ ರಚಿಸಿ ಗ್ರಾಮದ 250 ಮನೆಗಳಿಗೆ ಹಂಚಲಾಯಿತು.ಈ ಕೂಪನ್ ನಲ್ಲಿ ಸೂಚಿಸಿದ ಗ್ರಾಮದ ದಿನಸಿ ಅಂಗಡಿಗಳಲ್ಲಿ ರೂಪಾಯಿ 400/- ಮೌಲ್ಯದ ದಿನಸಿ ಸಾಮಗ್ರಿಗಳನ್ನು ಖರೀದಿಸ ಬಹುದಾಗಿದೆ.ಅಲ್ಲದೆ ನಾರಾವಿಯ ಒಂದು ಮೆಡಿಕಲ್ ಸ್ಟೋರ್ ನಲ್ಲಿ ಔಷಧಿ ಸಾಮಗ್ರಿಗಳನ್ನು ಖರೀದಿಸಲು ಅನುಕೂಲ ಮಾಡಿಕೊಡಲಾಗಿದೆ.

ಈ ಕೂಪನ್ ವಿತರಣೆಯನ್ನು ಕೊಕ್ರಾಡಿಯ ಕ್ಷೇಮ ಕ್ಲಿನಿಕ್ ವಠಾರದಲ್ಲಿ ಡಾ.ವಿಷ್ಣುಕುಮಾರ್ ಹೆಗ್ಡೆಯವರು ಸಾಂಕೇತಿಕವಾಗಿ ಉದ್ಘಾಟಿಸಿದ್ದು,ಕೊಕ್ರಾಡಿ ಹೊಸಮನೆ ಗುತ್ತು ಪ್ರಕಾಶ್ ಜೈನ್,ಮಾನ್ಯೋಡಿ ಗುತ್ತು ರವಿ ಪೂಜಾರಿ,ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಮಂಜಪ್ಪ ಪೂಜಾರಿ,ಪ್ರಗತಿಪರ ಕೃಷಿಕ ಸ್ಟೀವನ್ ಪಿರೇರಾ,ನ್ಯಾಯವಾದಿ ನವೀನ್ ಶೆಟ್ಟಿ,ಉಮೇಶ್ ಹೆಗ್ಡೆ,ದಿನೇಶ್ ಪೂಜಾರಿ, ಶಶಿಧರ ಅಂಬಲ,ಸತೀಶ್ ಪೂಜಾರಿ ಜಂತಿಗೋಳಿ ಉಪಸ್ಥಿತಿ ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.