ಗುರುವಾಯನಕೆರೆ ಬಳಿ ಹಿಟ್ ಏಂಡ್ ರನ್ ಪ್ರಕರಣ: ಎ.ಟಿ.ಎಂ ಕಾವಲುಗಾರ,‌ ಲಿಂಗಪ್ಪ ಮೂಲ್ಯ ಸ್ಥಳದಲ್ಲೇ ಸಾವು

ಗುರುವಾಯನಕೆರೆ; ಇಲ್ಲಿನ ಅರಫಾ ಸೇನಿಟರಿ ಮಳಿಗೆಯ ಎದುರು ಇಂದು ಬೆಳಿಗ್ಗೆ ಸ್ಕೂಟರ್ ಗೆ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ, ಕುವೆಟ್ಟು ಗ್ರಾಮದ ಪಾಂಡೇಶ್ವರ ನಿವಾಸಿ ಲಿಂಗಪ್ಪ ಮೂಲ್ಯ( 62ವ.) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಲ್ಲೇ ಪಕ್ಕದ ತೋಡಿನಿಂದ ಗೋಣಿ ಚೀಲದಲ್ಲಿ ಮರಳು ತುಂಬಿಕೊಂಡು ತನ್ನ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯಾವುದೋ ವಾಹನ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಲಿಂಗಪ್ಪ ಮೂಲ್ಯ ಅವರು ಗುರುವಾಯನಕೆರೆ ಕರ್ಣಾಟಕ ಬ್ಯಾಂಕ್ ಎಟಿಎಂ ನಲ್ಲಿ ಕಾವಲುಗಾರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.