ದೇಶಾದ್ಯಂತ ಮೂರನೇ ಹಂತದ ಲಾಕ್‍ಡೌನ್ ವಿಸ್ತರಿಸಿದ ಕೇಂದ್ರ ರೆಡ್‍ಝೋನ್‍ನಲ್ಲಿ ಕಠಿಣ ನಿರ್ಬಂಧ, ಆರೆಂಜ್, ಗ್ರೀನ್ ಝೋನ್‍ಗಳಲ್ಲಿ ಷರತ್ತುಬದ್ಧ ವಿನಾಯಿತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನವದೆಹಲಿ: ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶಾದ್ಯಂತ ವಿಧಿಸಿದ್ದ ಲಾಕ್‍ಡೌನ್‍ನ್ನು ಮತ್ತೆ ಎರಡು ವಾರಗಳ (ಮೇ 4ರಿಂದ ಮೇ 17ರವರೆಗೆ) ಕಾಲ ಕೆಲವು ವಿನಾಯಿತಿಗಳನ್ನು ನೀಡಿ ಮೂರನೇ ಹಂತದ ಲಾಕ್‍ಡೌನ್‍ನ್ನು ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ.

ದೇಶದಲ್ಲಿ ರೆಡ್ ಝೋನ್ ವಲಯದಲ್ಲಿರುವ 130 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿಯಲ್ಲಿ ಇರಲಿದೆ. ಈ ಪೈಕಿ ಕರ್ನಾಟಕದ 3 ಜಿಲ್ಲೆಗಳೂ ಸೇರಿವೆ. ರೆಡ್‍ಝೋನ್‍ನಲ್ಲಿ ಈಗಿರುವ ನಿರ್ಬಂಧಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕಂಟೇನ್‍ಮೆಂಟ್ ಝೋನ್‍ಗಳಲ್ಲಿ ಕೇಂದ್ರ ಸರ್ಕಾರ ಹೊರ ತಂದಿರುವ ಆರೋಗ್ಯ ಸೇತು ಆಪ್ ಕಡ್ಡಾಯ ಮಾಡಲಾಗಿದೆ.

ಗ್ರೀನ್ ಝೋನ್ ಮತ್ತು ಆರೆಂಜ್ ಝೋನ್‍ಗಳಲ್ಲಿ ಕೆಲವು ಸಡಿಲಿಕೆ ನೀಡಲಾಗುತ್ತದೆ ಎನ್ನಲಾಗಿದೆ. ಕೈಗಾರಿಕೆಗಳಿಗೆ ಷರತ್ತುಬದ್ದ ಅನುಮತಿ ನೀಡಲಾಗಿದೆ. ಔಷಧ ವೈದ್ಯಕೀಯ ಸಲಕರಣೆಗಳ ಉತ್ಪಾದನೆಗೆ ಅವಕಾಶ ನೀಡಲಾಗಿದೆ. ಅಂತಾರಾಜ್ಯ ಸಾರಿಗೆಗೆ ಅವಕಾಶ ನೀಡಲಾಗಿಲ್ಲ. ಕೇಂದ್ರ ಸರಕಾರದ ಲಾಕ್‍ಡೌನ್ ವಿಸ್ತರಣೆ ಆದೇಶವು ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗಲಿದೆ. ಇಡೀ ದೇಶ ಮೇ.17ರವರೆಗೆ ಲಾಕ್‍ಡೌನ್ ಆದೇಶವನ್ನು ಪಾಲಿಸಬೇಕಿದೆ.

ಮೇ. 17ರವರೆಗೆ ಸಾರ್ವಜನಿಕ ಸಾರಿಗೆಗೆ ಚಾಲನೆ ದೊರೆಯುವುದಿಲ್ಲ. ರೈಲಿಗಳೂ ಕೂಡ ಮತ್ತೆ ಎರಡು ವಾರಗಳ ಕಾಲ ಸ್ತಬ್ಧವಾಗಲಿವೆ. ಅಂದರೆ ರೈಲುಗಳ ಸಂಚಾರಕ್ಕೂ ಅನುಮತಿ ನೀಡಲಾಗಿಲ್ಲ. ಶಾಪಿಂಗ್ ಕಾಂಪ್ಲೆಕ್ಸ್‍ಗಳಿಗೆ ಅನುಮತಿ ನೀಡಲಾಗಿಲ್ಲ. ಕಟ್ಟಡ ಕಾರ್ಮಿಕರು, ನಿರ್ಮಾಣ ಕಾಮಗರಿಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಶರತ್ತುಬದ್ಧ ಅನುಮತಿ ನೀಡಲಾಗಿದೆ. ಆದರೆ, ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವಂತಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.