ಮಚ್ಚಿನ ಬೆರ್ಬಲಾಜೆಯಲ್ಲಿ ಅಕ್ರಮ ಕಸಾಯಿಖಾನೆ ಪೊಲೀಸರ ದಾಳಿ: ಇಬ್ಬರು ಆರೋಪಿಗಳ ಬಂಧನ

ಪುಂಜಾಲಕಟ್ಟೆ: ಮಚ್ಚಿನ ಗ್ರಾಮದ ಬೆರ್ಬಲಾಜೆ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜಾನುವಾರು ವಧ ಕೇಂದ್ರಕ್ಕೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಮೇ.1ರಂದು ವರದಿಯಾಗಿದೆ.

ಮಚ್ಚಿನ ಗ್ರಾಮದ ಬೆರ್ಬಲಾಜೆ ನಿವಾಸಿಗಳಾದ ನಿವಾಸಿಗಳಾದ ಮಹಮ್ಮದ್ ಹನೀಫ್ ಮತ್ತು ಮಹಮ್ಮದ್ ಸಾಧಿಕ್ ಬಂಧಿತ ಆರೋಪಿಗಳು. ದಾಳಿ ವೇಳೆ ಓರ್ವ ಆರೋಪಿ ಹಂಝ ಎಂಬಾತ ಪರಾರಿಯಾಗಿದ್ದಾರೆ. ಬಂಧಿತರಿಂದ ಸುಮಾರು ರೂ.3 ಸಾವಿರ ಮೌಲ್ಯದ 15 ಕೆ.ಜಿ ದನದ ಮಾಂಸವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಚ್ಚಿನ ಗ್ರಾಮದ ಬೆರ್ಬಲಾಜೆ ಮಹಮ್ಮದ್ ಹನೀಫ್ ಎಂಬಾತ ತನ್ನ ಮನೆಯ ಹಿಂಭಾಗದಲ್ಲಿ ಕಟ್ಟಿಕೊಂಡಿರುವ ಕೊಟ್ಟಿಗೆಯಲ್ಲಿ ಎಲ್ಲಿಂದಲೋ ಕದ್ದುಕೊಂಡು ತಂದ ಜಾನುವಾರುಗಳನ್ನು ಅಕ್ರಮವಾಗಿ ವಧೆ ಮಾಡಿ ಮಾಂಸ ಮಾರಾಟ ನಡೆಸುತ್ತಿದ್ದನೆನ್ನಲಾಗಿದ್ದು, ಈ ಬಗ್ಗೆ ಸ್ಥಳೀಯರು ನೀಡಿದ ಖಚಿತ ಮಾಹಿತಿಯನ್ವಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್.ಐ ಸೌಮ್ಯ ಇವರ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿತ್ತು.
ದಾಳಿ ವೇಳೆ ಓರ್ವ ಆರೋಪಿ ಪರಾರಿಯಾದರೆ, ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿ, ಜೊತೆಗೆ ವಧೆ ಮಾಡಲು ಬಳಸಿದ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.