ಸರಕಾರ ನೀಡಿದ ವೇತನಕ್ಕೆ ಸ್ವಂತ ದುಡ್ಡು ಸೇರಿಸಿ 25 ಲಕ್ಷ ರೂ. ಕೋವಿಡ್ ಜನಸೇವೆಗೆ ಮೀಸಲಿಟ್ಟ ಎಂ.ಎಲ್.ಸಿ ಹರೀಶ್ ಕುಮಾರ್

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್ತು ಶಾಸಕ ಹರೀಶ್ ಕುಮಾರ್ ಅವರು ವಿಧಾನ ಪರಿಷತ್ತು ಶಾಸಕರ ನೆಲೆಯಲ್ಲಿ ಕಳೆದ 20 ತಿಂಗಳಿನಿಂದ ನೀಡಿದ ಸರಕಾರಿ ವೇತನಕ್ಕೆ ಸ್ವಂತ ದೇಣಿಗೆ ಸೇರಿಸಿ 25 ಲಕ್ಷ ರೂ.ಗಳಲ್ಲಿ ಕೋವಿಡ್ ಸಂಕಷ್ಟಕ್ಕೊಳಗಾದವರಿಗೆ ನೆರವು ನೀಡಲು ಮೀಸಲಿಟ್ಟು ಕೆಲಸ ಮಾಡುತ್ತಿದ್ದಾರೆ.

ಖಾಸಗಿ ವೆಬ್‌ಸೈಟ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತೆರೆದಿಟ್ಟಿದ್ದಾರೆ.

ಪ್ರಾರಂಭದಲ್ಲಿ ನನ್ನ ಗ್ರಾಮವಾದ ನಡ ಗ್ರಾಮದ ಬಡ ಕುಟುಂಬಗಳಿಗೆ ಅಕ್ಕಿ ಹೊರತುಪಡಿಸಿ ಇತರ ಧಾನ್ಯಗಳ ಕಿಟ್ ನೀಡಬೇಕೆಂದು ತೀರ್ಮಾನಿಸಿ ಪ್ರಾರಂಭಿಸಿದೆ. ಆದರೆ ಗ್ರಾಮದ ಬಹುತೇಕ ಎಲ್ಲ ಕುಟುಂಬಗಳೂ ಕಿಟ್ ಸ್ವೀಕರಿಸಿದಾಗ ಜನರು ಎಷ್ಟು ಸಮಸ್ಯೆಯಲ್ಲಿದ್ದಾರೆ ಎಂಬುದನ್ನು ತಿಳಿಯಲು ಸಾಧ್ಯವಾಯಿತು. ಬಳಿಕ ಮುಂಡೂರು ಗ್ರಾಮಕ್ಕೆ ವಿಸ್ತರಿಸಿದೆ. ಆ ಬಳಿಕ ಚೈನ್‌ಲಿಂಕ್‌ನಂತೆ ಜನರ ಸಮಸ್ಯೆಗೆ ಸ್ಪಂದಿಸುತ್ತಾ ರಿಕ್ಷಾ ಚಾಲಕರು, ಖಾಸಗಿ ಬಸ್ಸು ಚಾಲಕ- ನಿರ್ವಾಹಕರು, ಆಶಾ ಕಾರ್ಯಕರ್ತರು, ಗೃಹರಕ್ಷಕದಳದ ಸಿಬ್ಬಂದಿಗಳು ಹಾಗೂ ಇತರ ಆವಶ್ಯಕತೆ ಇರುವ ಕುಟುಂಬಗಳಿಗೆ ವಿತರಿಸುತ್ತಾ ಸುಮಾರು 10 ಸಾವಿರ ಕುಟುಂಬಗಳು ದಾಟಿದೆ ಎಂದರು.

20 ತಿಂಗಳಿನಿಂದ ಎಂ.ಎಲ್.ಸಿ ಆಗಿರುವ ನನಗೆ ಸರಕಾರದಿಂದ ವೇತನ ಬರುತ್ತಿದೆ. ಪ್ರಯಾಣ ಭತ್ಯೆ, ಆಪ್ತ ಕಾರ್ಯದರ್ಶಿ ವೇತನ ಇತ್ಯಾದಿ ಸೇರಿ 20 ಲಕ್ಷ ರೂ. ಬಂದಿರುವುದಕ್ಕೆ ನನ್ನ ವೈಯುಕ್ತಿಕ ಕೃಷಿ ಮತ್ತು ವ್ಯಾಪಾರದ ಸ್ವಂತ ಹಣ 5 ಲಕ್ಷ ರೂ. ಗಳನ್ನು ಸೇರಿಸಿ 25 ಲಕ್ಷ ರೂ.ಗಳಿಂದ ಇಷ್ಟೆಲ್ಲ ಸೇವಾ ಚಟುವಟಿಕೆ ಮಾಡಿದ್ದೇನೆ. ಇದಕ್ಕೆ ನಾನೂ ಯಾರಿಂದಲೂ ಹಣ ಸಂಗ್ರಹ ಮಾಡಿಲ್ಲ. ದೀಗ ಎರಡನೇ ಹಂತದಲ್ಲಿ ಜನರಿಗೆ ಸಿಕ್ಕಿರುವ ಅಕ್ಕಿ ಮುಗಿಯುತ್ತಿರುವುದನ್ನು ಮನಗಂಡು ಪ್ರತೀ ಗ್ರಾಮದಲ್ಲಿ ಸ್ಥಳೀಯ ಕಾರ್ಯಕರ್ತರು ಮತ್ತು ದಾನಿಗಳ ಜೊತೆ ಸೇರಿಕೊಂಡು ನನ್ನ ಸಹಕಾರವನ್ನೂ ನೀಡುತ್ತಾ ಅಕ್ಕಿ ವಿತರಣೆ ಆರಂಭಿಸಿದ್ದೇವೆ. ಈಗಾಗಲೇ 3-4 ಸಾವಿರ ಮಂದಿಗೆ ನೀಡಲಾಗಿದ್ದು ಇನ್ನೂ ಈ ಕಾರ್ಯ ಮುಂದುವರಿಯಲಿದೆ ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.