ಗ್ರೀನ್ ಬಾಯ್ಸ್, ಮುಸ್ಲಿಂ ಒಕ್ಕೂಟ ಗೇರುಕಟ್ಟೆ ಗ್ರೂಪ್‌ನಿಂದ 150 ಕುಟುಂಬಗಳಿಗೆ 2. 83 ಲಕ್ಷ ರೂ ವೆಚ್ಚದಲ್ಲಿ ರಂಝಾನ್ ಕಿಟ್ ವಿತರಣೆ


ಗೇರುಕಟ್ಟೆ: ಅನೇಕ ಜನಪರ ಮತ್ತು ಜೀವಕಾರುಣ್ಯ ಕಾರ್ಯಕ್ರಮಗಳನ್ನು ಅನುಷ್ಠಾನಿಸುತ್ತಾ ಪ್ರಚಾರ ಬಯಸದೆ ಕೆಲಸ ಮಾಡುತ್ತಿರುವ ಗೇರುಕಟ್ಟೆ ಮುಸ್ಲಿಂ ಒಕ್ಕೂಟ ಹಾಗೂ ಗ್ರೀನ್ ಬಾಯ್ಸ್ ಗೇರುಕಟ್ಟೆ ವಾಟ್ಸಪ್ ಗೂಪ್‌ನ ವತಿಯಿಂದ ಇದೀಗ ಗ್ರಾಮದ 150 ಕಟುಂಬಗಳಿಗೆ 2,83,350 ರೂ. ವೆಚ್ಚದಲ್ಲಿ ರಂಝಾನ್ ಕಿಟ್ ವಿತರಣೆ ನಡೆಸುವ ಮೂಲಕ ಸಾಮಾಜಿಕ ಬದ್ಧತೆ ಮೆರೆದಿದೆ.

ಲಾಕ್‌ಡೌನ್ ನಿಮಿತ್ತ ಸಂಕಷ್ಟದಲ್ಲಿರುವ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪರಪ್ಪು ಜಮಾಅತ್ತಿನ ಕುಟುಂಬಗಳೀಗೆ ಕಿಟ್ ಗಳನ್ನು ವಿತರಿಸಲಾಯಿತು.

ಅಶ್ರಫ್ ಜಿ. ಡಿ, ಸಮದ್ ಚಮ್ಮ, ಹಿದಾಯತುಲ್ಲ, ರನೀಝ್, ಅನ್ಸಾರ್, ನಿಝಾಮ್, ಅನ್ವರ್ ಇವರ ನೇತೃತ್ವದ ವಾಟ್ಸಾಪ್ ಗ್ರೂಪಿನ ಸದಸ್ಯರು, ಊರವರ ಸಹಕಾರದೊಂದಿಗೆ ಈ ಕಾರ್ಯ ಅನುಷ್ಠಾನಿಸಿದರು.

ಈಗಾಗಲೇ ಲಾಕ್‌ಡೌನ್ ಆಗಿದ್ದ ಪ್ರಾರಂಭದ ದಿನಗಳಲ್ಲಿ ಇದೇ ಸಂಘಟನೆ ಪ್ರಚಾರ ಬಯಸದೆ ಹಿಂದು ಮುಸ್ಲಿಂ ಎಂಬ ಭೇದವಿಲ್ಲದೆ ಒಟ್ಟು 180 ಅರ್ಹ ಕುಟುಂಬಗಳಿಗೆ ಕೋವಿಡ್ ನೆರವಿನ ಆಹಾರದ ಕಿಟ್ ವಿತರಿಸಿ ಮಾದರಿಯಾಗಿತ್ತು. ಈಗಾಗಲೇ ಈ ಗ್ರೂಪ್‌ನಿಂದ ಅರ್ಹ ಕುಟುಂಬಗಳ 9 ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ಕೂ ನೆರವು ಲಭಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.