ಕರಾಯದ 250 ಕುಟುಂಬಗಳಿಗೆ ವಸಂತ ಬಂಗೇರ- ಹರೀಶ್ ಕುಮಾರ್ ರಿಂದ ಅಕ್ಕಿ ವಿತರಣೆ

ತಣ್ಣೀರುಪಂತ; ಇಲ್ಲಿನ ಗ್ರಾ.ಪಂ‌ ವ್ಯಾಪ್ತಿಯ ಕರಾಯ ಪರಿಸರದ ಒಟ್ಟು 250 ಅರ್ಹ ಕುಟುಂಬಗಳಿಗೆ ಮಾಜಿ ಶಾಸಕ ವಸಂತ ಬಂಗೇರ ಮತ್ತು ವಿಧಾನ ಪರಿಷತ್ತು ಶಾಸಕ ಹರೀಶ್ ಕುಮಾರ್ ಅವರು ಜಂಟಿಯಾಗಿ ಕೊಡುಗೆ ನೀಡಿದ ಆಕ್ಕಿ‌ ಕಿಟ್ ಗಳನ್ನು ಇಂದು ಕರಾಯ ಜನತಾ ಕಾಲನಿಯಲ್ಲಿ ವಿತರಿಸಲಾಯಿತು.

ಮಾಜಿ ಶಾಸಕ‌ ವಸಂತ ಬಂಗೇರ, ವಿಧಾನ ಪರಿಷತ್ತು ಶಾಸಕ ಹರೀಶ್ ಕುಮಾರ್ ಜಂಟಿಯಾಗಿ ಅಕ್ಕಿ ವಿತರಿಸಿದರು.

ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಜಿ.ಪಂ ಸದಸ್ಯ ಕೆ.ಕೆ ಶಾಹುಲ್ ಹಮೀದ್, ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ, ಆದಂ, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಬಳಿಯ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು. ಸೇರಿದ್ದ ಅಷ್ಟೂ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ದಲ್ಲಿ ಭಾಗಿಯಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.