ವಿ.ಹಿಂ.ಪ ಭಜರಂಗದಳ ಬೆಳ್ತಂಗಡಿ ನಗರದ ವತಿಯಿಂದ 200 ಮನೆಗಳಿಗೆ ಅಕ್ಕಿ ವಿತರಣೆ

ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ನಗರ ಮತ್ತು ಶ್ರೀ ಆಂಗಾಳ ಪರಮೇಶ್ವರಿ ದೇವಸ್ಥಾನ ಕಲ್ಲಗುಡ್ಡೆ ಇದರ ಸಹಯೋಗದಿಂದ ಸುಮಾರು 200 ಮನೆಗಳಿಗೆ ಅಕ್ಕಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ತು ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯ ಅಂಬರೀಶ್ ಕಲ್ಲಗುಡ್ಡೆ, ವಿಶ್ವಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಜೊತೆ ಕಾರ್ಯದರ್ಶಿ ಮೋಹನ್ ಕೆ, ಅಂಗಾಳ ಪರಮೇಶ್ವರಿ ದೇವಸ್ಥಾನ ಕಲ್ಲಗುಡ್ಡೆ ಇದರ ಆಡಳಿತ ಮೊಕ್ತೇಸರ ರಾಜಪ್ಪ, ಜಗದೀಶ್ ಕಲ್ಲಗುಡ್ಡೆ, ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ನಗರ ಕಾರ್ಯದರ್ಶಿ ಪ್ರಶಾಂತ್ ರಾಮಗಿರಿ, ಸಹಕಾರ್ಯದರ್ಶಿ ರೋಷನ್ ಜೈನ್, ಬಜರಂಗದಳ ಸೇವಾಪ್ರಮುಖ್ ವಿಘ್ನೇಶ್ ಆಚಾರ್ಯ, ಗಣೇಶ್ ಪಂದಳಕಂದ ಮೊದಲಾದವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.