ಎಲ್ಲಾ ಮುಸ್ಲಿಂ ಬಾಂಧವರು ಸರಕಾರಿ ಆದೇಶದೊಂದಿಗೆ ಪ್ರವಾದಿ ವಚನ ಪಾಲಿಸುತ್ತಿರುವುದು ಅಭಿನಂದನಾರ್ಹ; ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಕಣಚೂರ್ ಮೋನು ಹಾಜಿ


ಕೊರೊನಾ ವೈರಸ್ ಪಿಡುಗು ವಿಶ್ವಾದ್ಯಂತ ಹರಡುವುದನ್ನು ತಡೆಯಲು‌ ಈಗಾಗಲೇ ಸರಕಾರ, ಜಿಲ್ಲಾಧಿಕಾರಿಗಳ ಮೂಲಕ ನೀಡಿರುವ ‌ರಾಜ್ಯ ವಕ್ಫ್ ಮಂಡಳಿಯ ನಿರ್ದೇಶನಗಳನ್ನು ಎಲ್ಲ‌ ಮಸ್ಜಿದ್ ಆಡಳಿತ ಮಂಡಳಿಗಳು ಯಥಾ ಪಾಲಿಸುತ್ತಿರುವುದು, ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಾಗ ಅಂದು ಪ್ರವಾದಿ ಪೈಗಂಬರ್ ಮುಹಮ್ಮದ್(ಸ.ಅ) ಅವರು ನೀಡಿದ್ದ ಧರ್ಮ ಸಮ್ಮತ ಆದೇಶದ ಪಾಲನೆಯೇ ಆಗಿದೆ ಎಂದು ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಕಣಚೂರ್ ಮೋನು ಹಾಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ‌.

ಸಾಂಕ್ರಾಮಿಕ ರೋಗ ತಡೆಗೆ ಪ್ರತಿಯೊಬ್ಬರೂ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳದೆ ಮನೆಯಲ್ಲೇ ಇರುವುದು, ಪ್ರಾರ್ಥನೆ ಸಲ್ಲಿಸುವುದು ಎಂಬ ಅಂದು ಪ್ರಾವಾದಿ ನೀಡಿದ್ದ ಆದೇಶದಂತೆ ಎಲ್ಲರೂ ಮನೆಯಲ್ಲೇ ರಂಝಾನ್ ಪ್ರಾರ್ಥನೆ, ತರಾವೀಹ್ ವಿಶೇಷ ನಮಾಝ್ ನಿರ್ವಹಣೆ, ನಿರ್ವಹಿಸಬೇಕಾಗಿದೆ.

ಈಗಾಗಲೇ ಆದೇಶದಲ್ಲಿ ತಿಳಿಸಿರುವಂತೆ ಪೇಶ್ ಇಲಾಮ್, ಅಥವಾ ಮುಅದ್ದಿನ್, ಮತ್ತು ಮಸ್ಜಿದ್ ಸಿಬ್ಬಂದಿಗಳು ಮಾತ್ರ ಮಸೀದಿಯಲ್ಲಿ ನಮಾಝ್ ನಿರ್ವಹಿಸಬಹುದು.
ಉಳಿದವರು ಎಲ್ಲರೂ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ, ಈ‌ ಮಹಾಮಾರಿ ತೊಲಗಿ ಸರ್ವ ಧರ್ಮೀಯರಿಗೂ ಒಳಿತಾಗುವಂತೆ ಪ್ರಾರ್ಥಿಸಿರಿ.

ಸರಕಾರ, ಆರೋಗ್ಯ ಇಲಾಖೆ ನೀಡಿರುವ ಎಲ್ಲಾ ನಿರ್ದೇಶನಗಳನ್ನು ರಂಝಾನ್ ತಿಂಗಳ ಇನ್ನು ಮುಂದಿನ ದಿನಗಳಲ್ಲೂ ಎಲ್ಲರೂ ಪಾಲಿಸಿಕೊಂಡು ಬರಬೇಕು.
ಜಿಲ್ಲಾಡಳಿತ ನೀಡುವ ಎಲ್ಲಾ ಮಾರ್ಗಸೂಚಿಗಳನ್ನು ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಪಾಲಿಸಿ ಶಾಂತಿಯುತವಾಗಿ ಪವಿತ್ರ ರಂಝಾನ್ ಮಾಸಾಚರಣೆ ಪೂರ್ತಿಗೊಳಿಸುವಂತೆ ಅವರು ಭಿನ್ನವಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.